ಚಿಗುರುಪಾದೆ ದೇವಾಲಯದಲ್ಲಿ ಯಕ್ಷಚಿಗುರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಅರ್ಚಕ ಬಾಲಸುಬ್ರಹ್ಮಣ್ಯ ಭಟ್, ವಸಂತ ಭಟ್ ತೊಟ್ಟೆತ್ತೋಡಿ ಮೊದಲಾದವರಿದ್ದರು. 
ಉಡುಪಿ

ಯಕ್ಷಚಿಗುರು ಆಮಂತ್ರಣ ಪತ್ರಿಕೆ ಬಿಡುಗಡೆ

ಇಂದಿರಾ ಎನ್ ಕೆ
ಮಂಜೇಶ್ವರ: ಮೀಯಪದವು ಶ್ರೀಗುರುನರಸಿಂಹ ಯಕ್ಷಬಳಗ ಕಲಾಸಂಸ್ಥೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ದೇಗುಲದ ಸಹಯೋಗದೊಂದಿಗೆ ಶ್ರೀಕ್ಷೇತ್ರದ ವಠಾರದಲ್ಲಿ ಆ.8ರಂದು ಯಕ್ಷಚಿಗುರು ಕಾರ್ಯಕ್ರಮ ಹಮ್ಮಿಕೊಂಡಿದೆ. ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕ್ಷೇತ್ರ ಅರ್ಚಕ ಬಾಲಸುಬ್ರಹ್ಮಣ್ಯ ಭಟ್ ಬಿಡುಗಡೆಗೊಳಿಸಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಗುರುನರಸಿಂಹ ಯಕ್ಷಬಳಗ ಮೀಯಪದವು ಸಂಸ್ಥೆಯ ಅಧ್ಯಕ್ಷ ಗಣೇಶ ನಾವಡ ಮೀಯಪದವು, ರಾಜಾರಾಮ ರಾವ್ ಮೀಯಪದವು, ಸದಾಶಿವ ರಾವ್ ಟಿ.ಡಿ.ಚಿಗುರುಪಾದೆ, ಪುಷ್ಪರಾಜ ಶೆಟ್ಟಿ ತಲೇಕಳ, ಹರೀಶ ನಾವಡ ಮಜಿಬೈಲು, ಗೌತಮ ನಾವಡ ಮಜಿಬೈಲು, ಯೋಗೀಶ ರಾವ್ ಚಿಗುರುಪಾದೆ ಉಪಸ್ಥಿತರಿದ್ದರು.