ಕೋಟದ ಯಕ್ಷಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ ವಾರ್ಷಿಕೋತ್ಸವದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಬೇಲ್ತೂರು ರಮೇಶ್ ನಾಯ್ಕ್ ಅವರಿಗೆ ಯಕ್ಷಸೌರಭ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಮುಖರಾದ ಟಿ.ಮಂಜುನಾಥ ಗಿಳಿಯಾರು, ರಾವೇಂದ್ರ ಕಾಂಚನ್, ರಾಜೇಶ್ ಗಾಣಿಗ ಅಚ್ಲಾಡಿ ಇದ್ದರು.
- ಶ್ರೀ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಪ್ರದಾನ
- ಯಕ್ಷಸೌರಭ ಕಲಾರಂಗ ವಾರ್ಷಿಕೋತ್ಸವ
ಕೋಟದ ಯಕ್ಷಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ ವಾರ್ಷಿಕೋತ್ಸವ ಇತ್ತೀಚೆಗೆ ಶ್ರೀ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಕೋಟ ಮಹತೋಭಾರ ಶ್ರೀ ಹಿರೇ ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ ಕಾರ್ಯಕ್ರಮ ಉದ್ಘಾಟಿಸಿದರು. ಯಕ್ಷಸೌರಭ ಸಂಸ್ಥೆ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಅಧ್ಯಕ್ಷತೆ ವಹಿಸಿದ್ದರು.
ಯಕ್ಷಸೌರಭ ಪ್ರಶಸ್ತಿ
ಹಿರಿಯ ಯಕ್ಷಗಾನ ಕಲಾವಿದ ಬೇಲ್ತೂರು ರಮೇಶ್ ನಾಯ್ಕ್ ಅವರಿಗೆ ಯಕ್ಷಸೌರಭ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರನ್ನು ಗೌರವಿಸಲಾಯಿತು.
ದ.ಕ. ಜಿಲ್ಲಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸತೀಶ್ ಕಿಣಿ ಬೆಳ್ವೆ ಮಾತನಾಡಿದರು. ಸಾಲಿಗ್ರಾಮ ಮಕ್ಕಳ ಮೇಳದ ಸುಜಯೀಂದ್ರ ಹಂದೆ ಅಭಿನಂದನಾ ಮಾತನಾಡಿದರು.
ಯಕ್ಷಸೌರಭ ಗೌರವ ಸಲಹೆಗಾರ ಟಿ.ಮಂಜುನಾಥ ಗಿಳಿಯಾರು, ಜಿಪಂ ಮಾಜಿ ಸದಸ್ಯ ರಾವೇಂದ್ರ ಕಾಂಚನ್, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ರೋಟರಿ ಮಾಜಿ ಸಹಾಯಕ ಪ್ರಾಂತಪಾಲ ಚಂದ್ರಶೇಖರ ಮೆಂಡನ್ ಉಪಸ್ಥಿತರಿದ್ದರು.