ಉಡುಪಿಯ ಕಡಿಯಾಳಿ ಶಾಲೆಯಲ್ಲಿ ವಿಶ್ವ ಜಲ ಹಾಗೂ ವಿಶ್ವ ವಾತಾವರಣ ದಿನ ಆಚರಿಸಲಾಯಿತು. ಪ್ರಭಾವತಿ ಎಸ್. ಅಡಿಗ, ಶ್ರೀನಿವಾಸ್ ರಾವ್ ಕೆ., ಸುನೀತಾ ಶೇಟ್ ಇದ್ದರು.
* ಪ್ರಭಾವತಿ ಎಸ್. ಅಡಿಗ ಅಭಿಪ್ರಾಯ
* ವಿಶ್ವ ಜಲ, ವಾತಾವರಣ ದಿನಾಚರಣೆ
ಉಡುಪಿ: ನಾವು ಬಳಸುತ್ತಿರುವ ಒಂದೊಂದು ಹನಿ ನೀರೂ ಸಹ ಪ್ರಕೃತಿಯ ದುಡಿಮೆಯ ಬೆವರಾಗಿದೆ. ನೀರು ಪೋಲು ಮಾಡಿದರೆ ಮುಂದೆ ಕಣ್ಣೀರು ಹಾಕಬೇಕಾಗುತ್ತದೆ. ಭೂಮಂಡಲದಲ್ಲಿ ಶೇ.72 ಭಾಗ ನೀರು ಆವರಿಸಿಕೊಂಡಿದ್ದರೂ ಕುಡಿಯಲು ಶೇ.3ರಷ್ಟು ಮಾತ್ರ ಯೋಗ್ಯವಾಗಿದೆ. ಅದರಲ್ಲಿ ಶೇ.1ರಷ್ಟು ಕ್ಲೋರೈಡ್, ಆರ್ಸೆನಿಕ್ ಮತ್ತು ನೈಟ್ರೇಟ್ ಪ್ರಮಾಣವಿದ್ದು, ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿದ ಸುರಕ್ಷಿತ ಮಿತಿ ಮೀರಿದೆ. ಹೀಗಾಗಿ ನೀರಿನ ಸಂರಕ್ಷಣೆ ಕಾರ್ಯ ಅತಿ ಮಹತ್ವದ್ದಾಗಿದೆ ಎಂದು ಕಡಿಯಾಳಿ ಶಾಲೆಯ ಆಡಳಿತ ಅಧಿಕಾರಿ ಪ್ರಭಾವತಿ ಎಸ್. ಅಡಿಗ ಅಭಿಪ್ರಾಯಪಟ್ಟರು.
ಉಡುಪಿಯ ಕಡಿಯಾಳಿ ಶಾಲೆಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಸೋಮವಾರ (ಮಾ.23) ಆಯೋಜಿಸಿದ್ದ ವಿಶ್ವ ಜಲ ಹಾಗೂ ವಿಶ್ವ ವಾತಾವರಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
* ನಾವೆಲ್ಲ ಎಚ್ಚೆತ್ತುಕೊಳ್ಳೋಣ
ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ. ಮಾತನಾಡಿ, ಕೆರೆ-ಬಾವಿಗಳನ್ನು ಮುಚ್ಚಿ ನಾವುಗಳೇ ಕಾಂಕ್ರೀಟ್ ಕಾಡು ಬೆಳೆಸುತ್ತಿದ್ದೆವೆ. ಜಲ, ವಾಯು ಮಾಲಿನ್ಯದಿಂದ ಪ್ರಾಣಿ&ಪಕ್ಷಿ ಸಂಕುಲ ಸಂಕಷ್ಟಕ್ಕೆ ಒಳಗಾಗಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ ಎಲ್ಲವನ್ನೂ ಬಲಿ ತೆಗೆದುಕೊಳ್ಳುತ್ತಿದ್ದಾನೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ಜನಾಂಗ ಭಾರಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.
ಶಾಲಾ ಶಿಕ್ಷಕಿಯರಾದ ಸುನೀತಾ ಶೇಟ್, ಜ್ಯೋತಿ ಪ್ರಭು, ದೀಪಾ, ರೂಪಾ, ರಾಘವ ಆಚಾರ್, ಕನಿಷ್ಕಾ, ವೇದಿಕೆಯ ಸದಸ್ಯರಾದ ಚಂದ್ರಕಲಾ, ಪೂರ್ಣಿಮಾ, ಸಹನಾ, ಸುನೀತಾ, ವನಜಾ, ಕಲ್ಪನಾ, ಸಂಗೀತಾ, ವಿಜಯಾ, ಅಕ್ಷತಾ, ಸುಚಿತ್ರಾ, ವಸಂತ, ವಾಸುದೇವ್ ಪಿ., ಸುದೇಶ್ ಪಿ. ರವೀಂದ್ರ ಎನ್., ಸುರೇಶ್ ಡಿ., ಅನುರಾಧಾ ಜಿ.ಎಸ್. ಇತರರು ಇದ್ದರು.