ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ರೆಡ್ಕ್ರಾಸ್ ದಿನಾಚರಣೆ ನಡೆಯಿತು. ಪ್ರಮುಖರಾದ ಜಯಕರ ಶೆಟ್ಟಿ, ಡಾ.ಕೆ.ಉಮೇಶ ಶೆಟ್ಟಿ, ಸತ್ಯನಾರಾಯಣ ಪುರಾಣಿಕ, ಸೀತಾರಾಮ ಶೆಟ್ಟಿ, ಯೋಗೀಶ ಶಾನುಭೋಗ್, ಪೃಥ್ವಿಶ್ರೀ ಜಿ.ಶೆಟ್ಟಿ ಉಪಸ್ಥಿತರಿದ್ದರು.
- ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ
- ಸ್ವಯಂ ಸೇವಕರ ಮಹತ್ವ, ಕಾರ್ಯವೈಖರಿ ಅರಿವು
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ಕ್ರಾಸ್ ಘಟಕ ಆಶ್ರಯದಲ್ಲಿ ವಿಶ್ವ ರೆಡ್ಕ್ರಾಸ್ ದಿನಾಚರಣೆ ಕಾಲೇಜಿನಲ್ಲಿ ಶುಕ್ರವಾರ ಜರುಗಿತು.
ಸ್ವಯಂ ಸೇವಕರ ಮಹತ್ವ, ಕಾರ್ಯವೈಖರಿ ಅರಿವು
ಸಂಪನ್ಮೂಲ ವ್ಯಕ್ತಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಸಭಾಪತಿ ಜಯಕರ ಶೆಟ್ಟಿ, ಯುವ ರೆಡ್ಕ್ರಾಸ್ನಲ್ಲಿ ಸ್ವಯಂ ಸೇವಕರ ಮಹತ್ವ ಹಾಗೂ ಪ್ರಪಂಚದಾದ್ಯಂತ ಅದರ ಕಾರ್ಯವೈಖರಿ ಬಗ್ಗೆ ತಿಳಿಸಿದರು.‘
ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಉಮೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ, ಸದಸ್ಯ ಸೀತಾರಾಮ ಶೆಟ್ಟಿ, ಕಾಲೇಜಿನ ಯುವ ರೆಡ್ಕ್ರಾಸ್ ಟಕದ ಸಂಯೋಜಕ ಯೋಗೀಶ ಶಾನುಭೋಗ್ ಹಾಗೂ ಪೃಥ್ವಿಶ್ರೀ ಜಿ.ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುರಭಿ ಸ್ವಾಗತಿಸಿದರು. ಸಹನಾ ವಂದಿಸಿದರು. ಅನಗ ಪ್ರಾರ್ಥಿಸಿದರು. ಯುವ ರೆಡ್ಕ್ರಾಸ್ ಸ್ವಯಂಸೇವಕಿ ಪ್ರಿಯಾಂಕಾ ನಿರೂಪಿಸಿದರು.