ಉಡುಪಿಯ ಜಿಲ್ಲಾ ರೆಡ್​ಕ್ರಾಸ್​ ಭವನದಲ್ಲಿ ವಿಶ್ವ ರೆಡ್​ ಕ್ರಾಸ್​ ದಿನ ಆಚರಿಸಲಾಯಿತು. ಡಾ. ಅಶೋಕ್​ ವೈ.ಜಿ., ಶ್ರೀಕಾಂತ್​ ಶಂಕರನಾರಾಯಣ, ಡಾ. ಗಣನಾಥ ಶೆಟ್ಟಿ ಎಕ್ಕಾರು, ಜಯಶ್ರೀ, ರಮಾದೇವಿ, ಸುಚಿತ್ರಾ ಇತರರಿದ್ದರು. 
ಉಡುಪಿ

ಜಗದಾದ್ಯಂತ ರೆಡ್​ ಕ್ರಾಸ್​ನ ಸೇವೆ ಅನನ್ಯ

 * ಉಡುಪಿ ಜಿಲ್ಲಾ ಉಪಸಭಾಪತಿ ಡಾ. ಅಶೋಕ್​ ವೈ.ಜಿ. ಅನಿಸಿಕೆ

* ವಿಶ್ವ ದಿನಾಚರಣೆ, ಡ್ಯುನಾಂಟ್​ ಪ್ರತಿಮೆಗೆ ಮಾಲಾರ್ಪಣೆ

ಉಡುಪಿ: ಅಂತಾರಾಷ್ಟ್ರೀಯ ರೆಡ್​ ಕ್ರಾಸ್​ ಸಂಸ್ಥೆಯು ಒಂದೂವರೆ ಶತಮಾನಗಳಿಂದ ಜಗತ್ತಿನ ವಿವಿಧೆಡೆ ಮಾನವೀಯ ಸೇವೆ ಸಲ್ಲಿಸುತ್ತಿದ್ದು, ಪ್ರಕೃತಿ ವಿಕೋಪ ಮತ್ತು ಯುದ್ಧ ಸಂದರ್ಭಗಳಲ್ಲಿ ಅದು ಸಲ್ಲಿಸಿದ ಸೇವೆ ಅನನ್ಯ. ಹೀಗಾಗಿಯೇ ನಾಲ್ಕು ಬಾರಿ ನೊಬೆಲ್​ ಪ್ರಶಸ್ತಿ ಗಳಿಸಿದೆ. ಉಡುಪಿ ಜಿಲ್ಲಾ ರೆಡ್​ ಕ್ರಾಸ್​ ಸಂಸ್ಥೆಯು ರಾಜ್ಯದಲ್ಲೇ ಪ್ರತಿಷ್ಠಿತವಾಗಿದೆ ಎಂದು ಉಡುಪಿ ಜಿಲ್ಲಾ ರೆಡ್​ ಕ್ರಾಸ್​ ಉಪಸಭಾಪತಿ ಡಾ. ಅಶೋಕ್​ ವೈ.ಜಿ. ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ರೆಡ್​ ಕ್ರಾಸ್​ ಘಟಕದಲ್ಲಿ ಶುಕ್ರವಾರ (ಮೇ 8) ಆಯೋಜಿಸಿದ್ದ ವಿಶ್ವ ರೆಡ್​ ಕ್ರಾಸ್​ ದಿನಾಚರಣೆ ನಿಮಿತ್ತ ರೆಡ್​ ಕ್ರಾಸ್​ನ ಸಂಸ್ಥಾಪಕ ಹೆನ್ರಿ ಡ್ಯುನಾಂಟ್​ ಅವರ ಪ್ರತಿಮೆಗೆ ಹಾರ ಅರ್ಪಿಸಿ ಮಾತಾನಾಡಿದರು.
ರೆಡ್​ ಕ್ರಾಸ್​ನ ಸಂಸ್ಥಾಪಕ ಹೆನ್ರಿ ಡ್ಯುನಾಂಟ್​ ಪ್ರತಿಮೆಗೆ ಡಾ. ಅಶೋಕ್​ ವೈ.ಜಿ. ಹಾರ ಅರ್ಪಿಸಿದರು.

ಹೈಕೋರ್ಟ್​ ವಕೀಲ ಶ್ರೀಕಾಂತ್​ ಶಂಕರನಾರಾಯಣ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್​ ಅಧಿಕಾರಿ ಜಯಶ್ರೀ ಉಪಸ್ಥಿತರಿದ್ದರು. 
ಜಿಲ್ಲಾ ರೆಡ್​ ಕ್ರಾಸ್​ನ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ, ರೆಡ್​ ಕ್ರಾಸ್​ನ ಇತಿಹಾಸ ವಿವರಿಸಿದರು. ಜಿಲ್ಲಾ ರೆಡ್​ ಕ್ರಾಸ್​ ಖಜಾಂಚಿ ರಮಾದೇವಿ ವಂದಿಸಿದರು.
ಫಲಾನುಭವಿಗಳಿಗೆ ಶ್ರವಣ ಸಾಧನ ಮತ್ತು ಗೃಹೋಪಯೋಗಿ ಸಾಮಾಗ್ರಿ ವಿತರಿಸಲಾಯಿತು.

ಜಿಲ್ಲಾ ರೆಡ್​ ಕ್ರಾಸ್​, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಮತ್ತು ವಾರ್ತಾ ಇಲಾಖೆಯ ಸಿಬ್ಬಂದಿ ಸುಚಿತ್ರಾ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಶ್ರವಣ ಸಾಧನ ಮತ್ತು ಗೃಹೋಪಯೋಗಿ ಸಾಮಾಗ್ರಿ ವಿತರಿಸಲಾಯಿತು.