ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನದ ನಿಮಿತ್ತ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಡಾ. ಅವಿನಾಶ್​ ಶೆಟ್ಟಿ ಗಿಡ ವಿತರಿಸಿದರು. ಮೋಹನ ಶೆಟ್ಟಿ, ಡಾ.ಶ್ಯಾಮ್​ ಇದ್ದರು. 
ಉಡುಪಿ

ಹಸಿರು, ಆರೋಗ್ಯಕರ ಭವಿಷ್ಯ ಸೃಷ್ಟಿಸುವ ಆಶಯ

* ಡಾ. ಅವಿನಾಶ್​ ಶೆಟ್ಟಿ ಅನಿಸಿಕೆ

* ಕೆಎಂಸಿಯಲ್ಲಿ ರೋಗಿಗಳಿಗೆ ಗಿಡ ವಿತರಣೆ

ಉಡುಪಿ: ಜನರಿಗೆ ತಗುಲಿರುವ ರೋಗಗಳನ್ನು ಗುಣಪಡಿಸಲು ಆಸ್ಪತ್ರೆಗಳು ಸಮರ್ಪಿತವಾಗಿವೆ. ಆದರೆ, ಆಸ್ಪತ್ರೆಯಿಂದಲೂ ಸಹ ಪ್ರಕೃತಿಯನ್ನು ರಸುವ ಮೂಲಕ ಆರೋಗ್ಯ ಸೇವೆ ವಿಸ್ತರಿಸಲು ಬಯಸಿದ್ದೇವೆ. ವಿಶ್ವ ಪರಿಸರದ ದಿನದ ನಿಮಿತ್ತ ಮಣಿಪಾಲದ ಕೆಎಂಸಿಯಲ್ಲಿ ಇರುವ ರೋಗಿಗಳಿಗೆ, ಸಹಾಯಕರಿಗೆ ಸಸಿ ವಿತರಿಸಿದ್ದೇವೆ. ಅದು ಭರವಸೆ, ಬೆಳವಣಿಗೆ ಮತ್ತು ಪರಿಸರದ ಬಗ್ಗೆ ಇರುವ ಕಾಳಜಿಯ ದ್ಯೋತಕವಾಗಿದೆ. ಹಸಿರು ಮತ್ತು ಆರೋಗ್ಯಕರ ಭವಿಷ್ಯ ಸೃಷ್ಟಿಸುವ ಆಶಯವಾಗಿದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ ತಿಳಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನದ ನಿಮಿತ್ತ ಶುಕ್ರವಾರ (ಜೂ.5) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ರೋಗಿಗಳು ಮತ್ತು ಅವರ ಸಹಾಯಕರಿಗೆ ಹಣ್ಣು ಮತ್ತು ಔಷಧೀಯ ಗುಣ ಹೊಂದಿರುವ 5 ಸಾವಿರ ಸಸಿಗಳನ್ನು ವಿತರಿಸಿ ಮಾತನಾಡಿದರು.
ಕೆಎಂಸಿಯಿಂದ ನಡೆದ ಸಸಿ ವಿತರಣಾ ಕಾರ್ಯವು ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ಮೋಹನ ಶೆಟ್ಟಿ, ಡಾ.ಶ್ಯಾಮ್​ ಇದ್ದರು.