ಉಡುಪಿ ಮಣಿಪಾಲದ ಕೆಎಂಸಿಯಲ್ಲಿರುವ ಶಾರದಾ ಮಾಧವ್​ ಪೈ ಒಪಿಡಿ. 
ಉಡುಪಿ

ಜು.25ಕ್ಕೆ ಕೆಎಂಸಿಯಲ್ಲಿ ವಿಶ್ವ ಭ್ರೂಣಶಾಸ್ತ್ರಜ್ಞರ ದಿನಾಚರಣೆ

* ಆಧುನಿಕ ಸಂತಾನೋತ್ಪತ್ತಿಯ ವಿಧಾನದ ಅರಿವು

ಉಡುಪಿ: ಆಧುನಿಕ ಸಂತಾನೋತ್ಪತ್ತಿ ವಿಜ್ಞಾನದ ಅದ್ಭುತವನ್ನು ಜನರ ಮನಸೆಳೆಯುವ ನಿಟ್ಟಿನಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಕಸ್ತೂರ್ಬಾ ಮೆಡಿಕಲ್​ ಕಾಲೇಜಿನ ಸಹಭಾಗಿತ್ವದಲ್ಲಿ ಜು.25ರಂದು ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಯ ಆವರಣದಲ್ಲಿರುವ ಮಣಿಪಾಲ್​ ಸೆಂಟರ್​ ಫಾರ್​ ಎಂಬ್ರಿಯಾಲಜಿ ಆ್ಯಂಡ್​ ರಿಪ್ರೊಡಕ್ಟಿವ್​ ಸೈನ್ಸ್​ನಲ್ಲಿ ವಿಶ್ವ ಭ್ರೂಣಶಾಸ್ತ್ರಜ್ಞರ ದಿನ (ವರ್ಲ್ಡ್​ ಎಂಬ್ರಿಯಾಲಜಿಸ್ಟ್​ ಡೇ) ಆಯೋಜಿಸಲಾಗಿದೆ.
"ಐವಿಎಫ್​ ಪ್ರಯೋಗಾಲಯದಲ್ಲಿ ಜೀವನದ ಅದ್ಭುತ ಅನುಭವಿಸಿ' ಎಂಬ ಘೋಷಣೆಯೊಂದಿಗೆ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಮಣಿಪಾಲದ ಡೀನ್​ ಡಾ. ಅನಿಲ್​ ಭಟ್​ ಉದ್ಘಾಟಿಸಲಿದ್ದಾರೆ.
ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಸಿಇಒ ಡಾ. ಸುಧಾಕರ್​ ಕಂಟಿಪುಡಿ ಉಪಸ್ಥಿತರಿರಲಿದ್ದಾರೆ. ವಿವಿಧ ಭ್ರೂಣಶಾಸ್ತ್ರಜ್ಞರು ಪಾಲ್ಗೊಳ್ಳಲಿದ್ದು, ಮಗುವಿನ ಕನಸಿನಲ್ಲಿರುವ ದಂಪತಿಗಳು ಸದುಪಯೋಗ ಮಾಡಿಕೊಳ್ಳಬೇಕು. ತಂತ್ರಜ್ಞಾನದ ಮೂಲಕ ಆಧುನಿಕ ಸಂತಾನೋತ್ಪತ್ತಿ, ಹೇಗೆ ಜೀವ ಸೃಷ್ಟಿಯಾಗುತ್ತದೆ ಎನ್ನುವುದನ್ನೂ ಈ ಕಾರ್ಯಕ್ರಮದಲ್ಲಿ ನೋಡಬಹುದಾಗಿದೆ.
ಸಾರ್ವಜಿನಿಕರಿಗೆ ಮುಕ್ತ ಅವಕಾಶವಿದ್ದು, ನೋಂದಣಿ ಉಚಿತವಾಗಿದೆ ಎಂದು ಕ್ಲಿನಿಕಲ್​ ಎಂಬ್ರಿಯಾಲಜಿ ಶ್ರೇಷ್ಠತಾ ಕೇಂದ್ರದ ಮುಖ್ಯಸ್ಥ ಹಾಗೂ ಫಲವತ್ತತೆ ಸಂರಕ್ಷಣಾ ಕೇಂದ್ರದ ಸಮನ್ವಯಕಾರ ಪ್ರೊ. ಡಾ. ಸತೀಶ್​ ಅಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.