ಬಟ್ಟೆಯ ಮೇಲೆ ರಚಿಸಿರುವ ಗುಜರಾತ್ ರಾಜ್ಯದ 'ಅಲಂಕಾರಿ' ಚಿತ್ರಕಲೆ. (ಸಾಂದರ್ಭಿಕ ಚಿತ್ರ)
* ಉಡುಪಿಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ
ಉಡುಪಿ: ಭಾವನಾ ಫೌಂಡೇಷನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಉಡುಪಿಯ ವೆಂಟನಾ ಫೌಂಡೇಷನ್ ಸಹಯೋಗದಲ್ಲಿ ಜನಪದ ದೇಸೀಯ ಕಲೆಯ ಸರಣಿ ಕಾರ್ಯಾಗಾರದ ನಿಮಿತ್ತ ಫೆ.28 ಮತ್ತು ಮಾ.1ರಂದು ಬಟ್ಟೆಯ ಮೇಲೆ ರಚಿಸಲ್ಪಡುವ ಗುಜರಾತ್ನ 'ಕಲಂಕಾರಿ' ಹಾಗೂ 'ಮಾತಾ ನೀ ಪಚೇಡಿ' ಚಿತ್ರಕಲೆಯ ಕಾರ್ಯಾಗಾರ ಆಯೋಜಿಸಲಾಗಿದೆ.
ಉಡುಪಿಯ ಬಡಗುಪೇಟೆಯಲ್ಲಿರುವ ವಾಸು ಏಜೆನ್ಸೀಸ್ ಸಮೀಪದಲ್ಲಿರುವ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ಫೆ.28ರಂದು ಬೆಳಗ್ಗೆ 9:30ಕ್ಕೆ ವೆಂಟನಾ ಫೌಂಡೇಷನ್ನ ಶಿಲ್ಪಾ ಭಟ್ ಉದ್ಘಾಟಿಸಲಿದ್ದಾರೆ. ಉಡುಪಿ ಸೀರೆಯ ವಸ್ತ್ರ ವಿನ್ಯಾಸಕಿ ಮಮತಾ ರೈ, ಭಾವನಾ ಫೌಂಡೇಷನ್ನ ನಿರ್ದೇಶಕ ಹಾವಂಜೆ ಮಂಜುನಾಥ್ ರಾವ್ ಪಾಲ್ಗೊಳ್ಳಲಿದ್ದಾರೆ.
ಸರಣಿಯ 18 ಮತ್ತು 19ನೇ ದೇಸೀಯ ಕಲಾ ಕಾರ್ಯಾಗಾರದಲ್ಲಿ ಬಟ್ಟೆಯ ಮೇಲೆ ರಚಿಸಲ್ಪಡುವ ಗುಜರಾತ್ ರಾಜ್ಯದ ಚಿತ್ರಕಲೆಯ ಕುರಿತು ಕಲಾವಿದ ಜಗದೀಶ್ ಚಿತ್ತಾರ ತರಬೇತಿ ನೀಡಲಿದ್ದಾರೆ. ಆಸಕ್ತರು ನೋಂದಣಿಗಾಗಿ ಕಾರ್ಯಾಗಾರದ ಸಂಯೋಜಕ, ಕಾವಿ ಕಲೆಯ ಖ್ಯಾತ ಕಲಾವಿದ ಡಾ. ಜನಾರ್ದನ್ ರಾವ್ ಹಾವಂಜೆ (ಮೊ.ಸಂ. 9845650544) ಅವರನ್ನು ಸಂಪರ್ಕಿಸಬಹುದು.