ಸಾಂದರ್ಭಿಕ ಚಿತ್ರ  
ಉಡುಪಿ

ನೀರಲ್ಲಿ ಮುಳುಗಿ ಕಾರ್ಮಿಕ ಸಾವು

ಗೋಪಾಲಕೃಷ್ಣ ಪಾದೂರ್
ಉಡುಪಿ : ಬ್ರಹ್ಮಾವರ ತಾಲೂಕು ಗರ್ಕಿ ಮಠದಲ್ಲಿ ಕಲ್ಲು ಕೊರೆಯಲ್ಲಿ ಈಜಲು ಹೋದ ತಮಿಳುನಾಡು ಮೂಲದ ಕಾರ್ಮಿಕ ಮೃತ ಪಟ್ಟಿದ್ದಾರೆ.
ಅರುಣ್ (42) ಮೃತರು. 50 ಅಡಿ ಅಳದ ಕೊರೆಯಲ್ಲಿ ನೀರು ತುಂಬಿದ್ದು , ಯುಗಾದಿ ರಜೆ ಹಿನ್ನೆಲೆಯಲ್ಲಿ ನಾಲ್ಕೈದು ಬಂದು ಕಾರ್ಮಿಕರು ಈಜಾಡಲು ತೆರಳಿದ್ದರು. ಈ ವೇಳೆ ಸ್ವಲ್ಪ ಮದ್ಯಪಾನ ಮಾಡಿದ್ದ ಅರುಣ್ ಈಜಲು ನೀರಿನಲ್ಲಿ ಸಾಧ್ಯವಾಗದೆ ನೀರಿನಲ್ಲಿ ಮುಳುಗಡೆಯಾಗಿದ್ದಾರೆ. ಮೃತದೇಹ ಪತ್ತೆಗಾಗಿ ಈಶ್ವರ ಮಲ್ಪೆ ತಂಡ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದೆ.