ಇಡ್ಯಾಡಿಯಲ್ಲಿ ನಡೆದ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಗಂಗಮ್ಮ, ವಾಸುದೇವ ಇಡ್ಯಾಡಿ, ವೆಂಕಟ್ ವಳಲಂಬೆ, ಪ್ರದೀಪ್ ರೈ ಮನವಳಿಕೆ ಇತರರು ಇದ್ದರು.
ಕಡಬ: ಕೃಷಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ನಮ್ಮಿಂದಾಗಬೇಕು. ಆ ಮೂಲಕ ಆರೋಗ್ಯಕರ ಜೀವನ ನಮ್ಮದಾಗಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ತಾಲೂಕಿನ ಇಡ್ಯಾಡಿ ಪರಮೇಶ್ವರ ಎಂಬುವರ ಇಡ್ಯಾಡಿ ಗೆಳೆಯರ ಬಳಗ, ಸವಣೂರು ಯುವಕ ಮಂಡಲ, ಶ್ರೀ ಆದಿಶಕ್ತಿ ಭಜನಾ ಮಂಡಳಿ, ಪೆರಿಯಡ್ಕ ಶ್ರೀ ಆದಿಶಕ್ತಿ ಉತ್ಸವ ಸಮಿತಿ, ಬಿಜೆಪಿ ಎಸ್‌ಟಿ ಮೋರ್ಚಾ ಸುಳ್ಯ ಮಂಡಲ, ಅಶ್ವಿನಿ ಫಾರ್ಮ್ಸ್ ಆಶ್ರಯದಲ್ಲಿ ಕೆಸರ್‌ಡ್ ಒಂಜಿದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಟಿ ವೈದ್ಯ ವಾಸುದೇವ ಇಡ್ಯಾಡಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ವಾಜಿ ಸಂಸದ ನಳಿನ್ ಕುವಾರ್ ಕಟೀಲ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಪುತ್ತೂರು ಎಪಿಎಂಸಿ ವಾಜಿ ಅಧ್ಯಕ್ಷ ದಿನೇಶ್, ಜಿಲ್ಲಾ ಯುವಜನ ಒಕ್ಕೂಟ ಅಧ್ಯಕ್ಷ ಸುರೇಶ್ ರೈ, ಕಡಬ ತಾಲೂಕು ಜನಜಾಗೃತಿ ವೇದಿಕೆ ನಿಕಟ ಪೂರ್ವಾಧ್ಯಕ್ಷ ಮಹೇಶ್ ಕೆ.ಸವಣೂರು , ಸಿಎ ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಪ್ರಮುಖರಾದ ಬಾಲಕೃಷ್ಣ, ರಾಜಾರಾಮ ಪ್ರಭು, ಗಿರಿಶಂಕರ ಸುಲಾಯ, ಚಂದ್ರಶೇಖರ ಪಿ., ಪ್ರಭಾಕರ ಶೆಟ್ಟಿ ನಡುಬೈಲು, ಸತೀಶ್ ಬಲ್ಯಾಯ, ಮನೋಹರ ಇಡ್ಯಾಡಿ, ಗಂಗಮ್ಮ, ಚೇತನ್, ಜಗದೀಶ್ ಗೌಡ, ಯತೀಶ್ ಇತರರು ಇದ್ದರು.
ಗಂಗಾಧರ ಪೆರಿಯಡ್ಕ ವಂದಿಸಿದರು, ರಾಜೇಶ್ ಇಡ್ಯಾಡಿ ಕಾರ್ಯಕ್ರಮ ನಿರೂಪಿಸಿದರು.