ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಕ್ಷೇಮಪಾಲನಾ ಸಮಿತಿ, ಆಂತರಿಕ ದೂರು ನಿರ್ವಹಣಾ ಸಮಿತಿಯ ಚಟುವಟಿಕೆಗಳಿಗೆ ಪ್ರಣಮ್ಯಾ ಭಟ್ ಚಾಲನೆ ನೀಡಿದರು. ಕಾಲೇಜು ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ರಮ್ಯಾ ಶೆಟ್ಟಿ ಮತ್ತಿತರರಿದ್ದರು.
ಮೂಡುಬಿದಿರೆ: ಪ್ರತಿಯೊಬ್ಬ ಮನುಷ್ಯನು ಅಪಾರ ಸಾಧ್ಯತೆಗಳೊಂದಿಗೆ ಜನಿಸುತ್ತಾನೆ. ಆ ಸಾಧ್ಯತೆಗಳಿಗೆ ಸೂಕ್ತ ಅವಕಾಶ, ಸಮಾನತೆ ದೊರೆತಾಗ ವ್ಯಕ್ತಿ ಮಾತ್ರವಲ್ಲ, ಸಮಾಜ ಅಭಿವೃದ್ಧಿಯಾಗುತ್ತದೆ. ಮಹಿಳೆಯರ ಸಬಲೀಕರಣವು ಕುಟುಂಬ, ಸಮಾಜ, ರಾಷ್ಟ್ರದ ಪ್ರಗತಿಗೆ ಪ್ರಮುಖ ಅಡಿಪಾಯ ಎಂದು ನಿಟ್ಟೆ ವಿವಿ ಪತ್ರಿಕೋದ್ಯಮ ವಿಭಾಗ ಸಹಾಯಕ ಪ್ರಾಧ್ಯಾಪಕಿ ಪ್ರಣಮ್ಯಾ ಭಟ್ ಹೇಳಿದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಮಿತಿ, ಆಂತರಿಕ ದೂರು ನಿರ್ವಹಣಾ ಸಮಿತಿಯ 2026-27ನೇ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್. ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಮಹಿಳಾ ಕ್ಷೇಮಪಾಲನಾ ಸಮಿತಿ ಸಂಯೋಜಕಿ ರಮ್ಯಾ ಶೆಟ್ಟಿ, ಆಂತರಿಕ ದೂರು ನಿರ್ವಹಣಾ ಸಮಿತಿ ಸಂಯೋಜಕಿ ಸುಲತಾ ವಿದ್ಯಾಧರ್ ಉಪಸ್ಥಿತರಿದ್ದರು. ಅನನ್ಯಾ ಅತಿಥಿಯನ್ನು ಪರಿಚಯಿಸಿದರು. ಲಿಖಿತಾ ನಿರೂಪಿಸಿದರು. ಸೃಜನ್ಯಾ ವಂದಿಸಿದರು.