ACCIDENT 
ಉಡುಪಿ

ಅಪಘಾತದಲ್ಲಿ ಮಹಿಳೆಗೆ ಗಂಭೀರ ಗಾಯ

ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪಡುಬಿದ್ರಿ: ಕಾಪು ಫ್ಲಾಟ್ ವೊಂದರ ಸಂಪರ್ಕ ರಸ್ತೆಯಲ್ಲಿ ಆಟೋಗಳೆರಡರ ನಡುವೆ ಗುರುವಾರ ಅಪಘಾತ ನಡೆದಿದ್ದು, ಕಾಪು ಪಡು ಗ್ರಾಮದ ಲಕ್ಷ್ಮೀ ಆಂಚನ್ ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.