ನಂದಳಿಕೆ ಗ್ರಾಮದ ಬೈರಾಬೆಟ್ಟು ನಿವಾಸಿ ಕುಶಲ ಪೂಜಾರ್ತಿ ಅವರ ಮನೆಗೆ ಹಾನಿಯಾಗಿರುವುದು.
- ಮರ ಬಿದ್ದು ಮನೆ ಜಖಂ
- ಸಿಡಿಲು ಬಡಿದು ಗೋಡೆ ಬಿರುಕು
- ಮನೆಯ ಮೇಲ್ಛಾವಣಿಗೆ ಹಾನಿ
ಕಾರ್ಕಳ: ತಾಲೂಕಿನಾದ್ಯಂತ ಶುಕ್ರವಾರ ಹಾಗೂ ಶನಿವಾರ ಸುರಿದ ಭಾರಿ ಗಾಳಿ ಗುಡುಗು ಮಳೆಗೆ ವಿವಿಧೆಡೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ.
ಕುಕ್ಕುಂದೂರು ಗ್ರಾಮದ ಕೇರ್ದಡ್ಡು ಎಂಬಲ್ಲಿಯ ಸುಂದರಿ ಅವರ ಮನೆ ಮೇಲೆ ಶನಿವಾರ ಮರ ಬಿದ್ದು ಹಾನಿಯಾಗಿದೆ.
ಸಿಡಿಲೇಟಿಗೆ ಗೋಡೆಯಲ್ಲಿ ಬಿರುಕು:
ಕುಕ್ಕುಂದೂರು ಗ್ರಾಮದ ನಡಿಬೆಟ್ಟು ಎಂಬಲ್ಲಿ ದಿನೇಶ್ ಎಂಬುವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಂಪರ್ಕ ಮೀಟರ್ ಬೋರ್ಡ್ ವಯರ್ ಮತ್ತು ಗೋಡೆಯಲ್ಲಿ ಬಿರುಕು ಸಂಭವಿಸಿದೆ. ಬಂಗ್ಲೆಗುಡ್ಡೆ ಸದ್ಭಾವನ ನಗರ ನಿವಾಸಿ ಮಾಧವ ಅವರ ಮನೆಗೆ ಮರ ಬಿದ್ದು ನಷ್ಟ ಉಂಟಾಗಿದೆ.
ಮನೆಯ ಮೇಲ್ಛಾವಣಿಗೆ ಹಾನಿ:
ಕುಕ್ಕುಂದೂರು ಗ್ರಾಮದ ಕೇರ್ದಡ್ಡು ಎಂಬಲ್ಲಿಯ ಸುಂದರಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿರುವುದು. ನಂದಳಿಕೆ ಗ್ರಾಮದ ಬೈರಾಬೆಟ್ಟು ಎಂಬಲ್ಲಿ ಕುಶಲ ಪೂಜಾರ್ತಿ ಅವರ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ನಂದಳಿಕೆ ಗ್ರಾಮದ ಕಕ್ಕೆಪದವು ನಿವಾಸಿ ಪುಷ್ಪಾ ಅವರ ಮನೆಯ ಹೆಂಚುಗಳು ಗಾಳಿಗೆ ಹಾರಿ ನಷ್ಟವಾಗಿದೆ. ಸರೋಜಿನಿ ಶೆಟ್ಟಿ ಎಂಬುವರ ಮನೆ ಛಾವಣಿಗೆ ಹಾನಿಯುಂಟಾಗಿದೆ. ರಾಘು ಶೆಟ್ಟಿ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.