ಚಾರ್ಮಾಡಿಯಲ್ಲಿ ಕಾಡಾನೆ ಕೃಷಿ ಹಾನಿಗೊಳಿಸಿರುವುದು. 
ಉಡುಪಿ

ಚಾರ್ಮಾಡಿಯಲ್ಲಿ ಕಾಡಾನೆ ಹಾವಳಿ, ಕೃಷಿ ಹಾನಿ

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಮಠದಮಜಲು ಎಂಬಲ್ಲಿ ಅನಂತ ರಾವ್ ಎಂಬುವರ ತೋಟಕ್ಕೆ ಶನಿವಾರ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು 50ಕ್ಕಿಂತ ಅಧಿಕ ಅಡಿಕೆ ಮರ, 10 ತೆಂಗಿನ ಮರ ಹಾಗೂ ಅಪಾರ ಪ್ರಮಾಣದಲ್ಲಿ ಬಾಳೆ ಕೃಷಿ ನಾಶ ಮಾಡಿವೆ.

ಮಠದ ಮಜಲು ಪರಿಸರ ಚಾರ್ಮಾಡಿ ಅರಣ್ಯದ ಅಂಚಿನಲ್ಲಿದ್ದು, ಇಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳು ಆಗಾಗ ದಾಳಿ ನಡೆಸುತ್ತಿವೆ. ಆನೆ ಹಾವಳಿಗೆ ಇಲಾಖೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಸ್ಥಳೀಯ ಕೃಷಿಕ ಪ್ರಕಾಶ ನಾರಾಯಣ ಆಗ್ರಹಿಸಿದ್ದಾರೆ.