ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕೊಂಬಿನಡ್ಕ ಪರಿಸರದಲ್ಲಿ ಬುಧವಾರ ರಾತ್ರಿ ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿ ಮಾಡಿದೆ.
ದಿಡುಪೆ-ಪೈಚಾರು ರಾಜ್ಯ ಹೆದ್ದಾರಿ ಬದಿಯಿಂದ ಸಂಚರಿಸಿದ ಮರಿಯಾನೆ ಸಹಿತ ಮೂರು ಆನೆಗಳು ಇಲ್ಲಿನ ಕೊಂಬಿನಡ್ಕದಲ್ಲಿ ಚಂದ್ರಕಲಾ ಗೋಖಲೆ ಅವರ ತೋಟದಲ್ಲಿ ಎಂಟು ತೆಂಗಿನ ಮರ, 50ಕ್ಕೂ ಹೆಚ್ಚು ಬಾಳೆ ಗಿಡ ಹಾಗೂ ನೀರಾವರಿ ಪೈಪ್‌ಲೈನ್‌ಗೆ ಹಾನಿ ಮಾಡಿವೆ. ಇದೇ ಪರಿಸರದ ದೇರಣ್ಣ, ಶ್ರೀನಿವಾಸ ಕಾಕತ್ಕರ್, ಸುಶೀಲಾ ಮಲೆಕುಡಿಯ, ಗಣಪತಿ ಭಟ್ ಮೊದಲಾದವರ ಮನೆ ಸಮೀಪದವರೆಗೂ ಸಂಚರಿಸಿರುವ ಕಾಡಾನೆಗಳು ಅಲ್ಲಲ್ಲಿ ಹಾನಿ ಉಂಟು ಮಾಡಿವೆ.