ACCIDENT 
ಉಡುಪಿ

ಕಾಡು ಹಂದಿ ಸ್ಕೂಟಿಗೆ ಡಿಕ್ಕಿ, ಇಬ್ಬರಿಗೆ ಗಾಯ

ಇಬ್ಬರು ಗಾಯ

ಕಾಸರಗೋಡು: ಬೋವಿಕ್ಕಾನ ಸಮೀಪದ ಮಂಜಕ್ಕಲ್ ಎಂಬಲ್ಲಿ ಕಾಡುಹಂದಿ ಡಿಕ್ಕಿಯಾದ ಪರಿಣಾಮ ಸ್ಕೂಟಿ ಮಗುಚಿ ಬಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಕರಿವೇಡಗಂ ತಂಗತಟ್ಟ ನಿವಾಸಿ ಸಿ.ಎಂ.ಜಿತಿನಾ ಹಾಗೂ ಸವಾರ ಆಲತುಂಕಡವ್‌ನ ಪಿ.ಅಮಲ್‌ರಾಜ್ ಗಾಯಾಳುಗಳು.

ಮನೆಯಿಂದ ಕಾಸರಗೋಡಿಗೆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದಾಗ ಮಂಜಕ್ಕಲ್‌ನಲ್ಲಿ ಏಕಾಏಕಿ ರಸ್ತೆಗೆ ಅಡ್ಡ ದಾಟಿದ ಕಾಡು ಹಂದಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿರುವ ಜಿತಿನಾ ಅವರನ್ನು ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಲ್‌ರಾಜ್ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.