ಬ್ರಹ್ಮಾವರ ಬೋರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ದುರ್ಬಲವಾಗಿರುವುದು. 
ಉಡುಪಿ

ದುರ್ಬಲ ಕಟ್ಟಡ ತೂಗುಗತ್ತಿ!

ಇಂದಿರಾ ಎನ್ ಕೆ
ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
130 ವರ್ಷ ಇತಿಹಾಸ ಇರುವ ಬ್ರಹ್ಮಾವರ ಬೋರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದಿಗೂ 750 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಶಾಲಾ ಕಟ್ಟಡ ದುರ್ಬಲವಾಗಿದ್ದು, ತುರ್ತಾಗಿ ಹೊಸ ಕಟ್ಟಡ ನಿರ್ಮಾಣವಾಗಬೇಕಾಗಿದೆ.
ಭಾರಿ ಗಾಳಿ ಮಳೆಗೆ ತರಗತಿ ನಡೆಯುತ್ತಿರುವ ಸಂದರ್ನ ಹೆಂಚು ಹಾರಿ ಹೋಗಿ ಹತ್ತಾರು ಹೆಂಚುಗಳು ತುಂಡಾಗಿ ಬಿದ್ದ ಕಾರಣ ಶಿಕ್ಷಣ ಇಲಾಖೆ ಮೇಲಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ 1, 2, 3ನೇ ತರಗತಿಗಳ ಮಕ್ಕಳಿಗೆ ಹೊರಗಡೆ ಮತ್ತು ಬೇರೆ ತರಗತಿಯೊಂದಿಗೆ ಜೋಡಣೆ ವಾಡಿ ಶಿಕ್ಷಣ ನೀಡಲಾಗುತ್ತಿದೆ.
ಬ್ರಹ್ಮಾವರ ನಗರ ಮಧ್ಯ ಭಾಗದಲ್ಲಿರುವ ಈ ಶಾಲೆಯ ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ದಾನಿಗಳ ನೆರವಿನಿಂದ ಹೊಸ ಕಟ್ಟಡದಲ್ಲಿ ತರಗತಿ ಕೊಠಡಿಗಳನ್ನು ವಾಡಿದ್ದಾರೆ. 30 ಶಿಕ್ಷಕರು ಇದ್ದು, ಶಿಕ್ಷಣ ಗುಣಮಟ್ಟ ಮತ್ತು ಮಕ್ಕಳ ಹೆಚ್ಚಳ ಕಂಡು ಆಂಗ್ಲ ವಾಧ್ಯಮ ಶಾಲೆ ಆರಂಭಗೊಂಡಿದೆ.
ಕಳೆದ ವರ್ಷ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ 3 ಅಂತಸ್ತಿನ ಹೊಸ ಕಟ್ಟಡದಲ್ಲಿ ಹಲವಾರು ತರಗತಿ ಕೊಠಡಿಗಳನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿತ್ತು.
ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವಿದ್ದು, ಕಂಪ್ಯೂಟರ್ ಶಿಕ್ಷಣಕ್ಕೆ ಪ್ರತ್ಯೇಕ ಕೊಠಡಿ, ಆಟದ ಮೈದಾನ, ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲ ುೂಲಸೌಕರ್ಯ ಇದ್ದು, ತರಗತಿ ಕೊಠಡಿ ಸರಿ ಇಲ್ಲದಿರುವುದು ಕೊರತೆಯಾಗಿದೆ. ಹಳೇ ಕಟ್ಟಡದ ಬದಲಿಗೆ ಹೊಸ ಕಟ್ಟಡ ನಿರ್ಮಿಸುವಂತೆ ಮಕ್ಕಳ ಪಾಲಕರು ಇಲಾಖೆಗೆ ಮನವಿ ನೀಡಿದ್ದು, ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆಯಲ್ಲಿ ಶಿಕ್ಷಣ ದೊರಕಲು ಸರ್ಕಾರ ತುರ್ತು ಹೊಸ ಕಟ್ಟಡ ನಿರ್ಮಿಸಬೇಕಿದೆ.

ದಾಖಲಾತಿ ಇಳಿಕೆ ಆತಂಕ

ಭಾರಿ ಗಾಳಿಗೆ ಶಾಲಾ ಕಟ್ಟಡ ಕೆಲವು ಹೆಂಚು ಹಾರಿ ಹೋಗಿ ವಿದ್ಯಾರ್ಥಿನಿ ಗಾಯಗೊಂಡ ಬಳಿಕ ಮಕ್ಕಳ ಪಾಲಕರು ಆತಂಕಿತರಾಗಿದ್ದಾರೆ. ಸರ್ಕಾರ ಶ್ರೀದಲ್ಲಿ ಹೊಸ ಕೊಠಡಿ ನಿರ್ಮಿಸಿ ನೀಡದಿದ್ದರೆ ಮುಂದಿನ ವರ್ಷ ದಾಖಲಾತಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಬಹುದು ಎಂಬ ಆತಂಕವಿದೆ ಎಂದು ಎಸ್‌ಡಿಎಂಸಿ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಹಳೇ ಕಟ್ಟಡವಾದರೂ ಇಲ್ಲಿನ ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಮತ್ತು ಪಿಟಿಐ ಶಾಲಾ ಶಿಕ್ಷಕರ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳ ಹೆಚ್ಚಳಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಿ ಮತ್ತು ಸರ್ಕಾರಿ ಶಾಲೆಗೆ ಸೂಕ್ತ ಕೊಠಡಿ ನಿರ್ಮಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಸಹಕಾರಿಯಾಗುವಂತೆ ಸರ್ಕಾರ ಮುತುವರ್ಜಿ ವಹಿಸಬೇಕು. ಹೊಸ ಕಟ್ಟಡವನ್ನು ನೀಡಿದಲ್ಲಿ ಸರ್ಕಾರಿ ಶಾಲೆಯೊಂದು ವಾದರಿಯಾಗಿ ಉಳಿಯಲಿದೆ.

— ಅರುಣ್ ಭಂಡಾರಿ ಬೈಕಾಡಿ ಎಸ್‌ಡಿಎಂಸಿ ಉಪಾಧ್ಯಕ್ಷ

ಬ್ರಹ್ಮಾವರ ಸರ್ಕಾರಿ ಪ್ರಾಥಮಿಕ ಶಾಲೆಗೆ 130 ವರ್ಷಗಳ ಇತಿಹಾಸವಿದೆ. ದುರ್ಬಲ ಕಟ್ಟಡವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬಳಸದಂತೆ ನಿರ್ದೇಶನ ನೀಡಲಾಗಿದೆ. ಈ ತನಕ ಇಲ್ಲಿ ನಡೆಯುತ್ತಿದ್ದ ತರಗತಿಯ ವಿದ್ಯಾರ್ಥಿಗಳನ್ನು ಶಾಲೆಯ ಬೇರೆ ಕೊಠಡಿಗೆ ಸ್ಥಳಾಂತರಿಸಲಾಗಿದೆ. ಹಳೇ ಕಟ್ಟಡವನ್ನು ತಾಂತ್ರಿಕ ವಿಭಾಗದಿಂದ ಪರಿಶೀಲನೆ ನಡೆಸಿ ಬಳಿಕ ಹೊಸ ಕಟ್ಟಡಕ್ಕೆ ಶಿಫಾರಸು ವಾಡಲಾಗುವುದು.

— ಲೋಕೇಶ್, ಡಿಡಿಪಿಐ