ಶಿರಿಯಾರ ಕಲ್ಮರ್ಗಿ ಶ್ರೀರಾಮ ಮಂದಿರದಿಂದ ಸಂಕೀರ್ತನಾ ಪಾದಯಾತ್ರೆ ನಡೆಯಿತು. 
ಉಡುಪಿ

ವ್ಯಾಸ ಧ್ವಜ ಸಂಕೀರ್ತನಾ ಪಾದಯಾತ್ರೆ

ಕೊಕ್ಕರ್ಣೆ: ಶಿರಿಯಾರ ಕಲ್ಮರ್ಗಿ ಶ್ರೀರಾಮ ಮಂದಿರದಿಂದ ಆರಂಭಗೊಂಡ ಸಂಕೀರ್ತನಾ ಪಾದಯಾತ್ರೆಗೆ ಸಾಮಾಜಿಕ ಕಾರ್ಯಕರ್ತ ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಶಿರಿಯಾರ ಕಲ್ಮರ್ಗಿ ಪ್ರಭಾಕರ್ ನಾಯಕ್ ಚಾಲನೆ ನೀಡಿದರು.
ಪಾದಯಾತ್ರೆ ಶ್ರೀರಾಮ ಮಂದಿರದಿಂದ ಆರಂಭಗೊಂಡು ತಾಂಗಾಡಿ, ಎತ್ತಿನಟ್ಟಿ, ಸಾಹೇಬರಕಟ್ಟೆ, ಗಿರಿಕೆಮಠ, ಮಧುವನ, ವಡ್ಡರ್ಸೆ ಮಾರ್ಗವಾಗಿ ಕೋಟ ಮೂರಕೈ ಮೂಲಕ ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ತಲುಪಿತು.
ದೇವರಿಗೆ ಅಲಂಕಾರ, ಪೂಜೆ, ಭಜನೆ, ಭಜನಾ ಕೀರ್ತನೆ, ಧಾರ್ಮಿಕ ಕಾರ್ಯಕ್ರಮ ಜರುಗಿತು. ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತಮಾನೋತ್ಸವ ಮಂಗಲೋತ್ಸವ ಪ್ರಯುಕ್ತ ಶ್ರೀ ವ್ಯಾಸ ಧ್ವಜ ಸಂಕೀರ್ತನಾ ಯಾತ್ರೆ ಜರುಗಿತು.
ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್‌ನ ಖಜಾಂಚಿ ಸಾಹುಕಾರ್ ದಾಮೋದರ ನಾಯಕ್ ಕಲ್ಮರ್ಗಿ ಪ್ರಸಾದ ಸ್ವೀಕರಿಸಿದರು. ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ ಅನಂತ ಭಟ್ ಅವರು ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಿದರು. ಜಿಎಸ್‌ಬಿ ಮುಖಂಡರಾದ ಶಿವಾನಂದ, ಪ್ರಖ್ಯಾತ್, ಪ್ರಕಾಶ್, ನಿತ್ಯಾನಂದ, ಭಕ್ತರು ಉಪಸ್ಥಿತರಿದ್ದರು. ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ಕಾರ್ಯದರ್ಶಿ ರವೀಂದ್ರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.