ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಆನೆಗುಂದಿ ಮಹಾಸಂಸ್ಥಾನ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಆಶೀರ್ವಚನ ನೀಡಿದರು. ಎಂ.ಪುರುಷೋತ್ತಮ ಆಚಾರ್ಯ, ಲೋಕೇಶ್ ಎಂ.ಬಿ., ಗಣೇಶ ಆಚಾರ್ಯ ಮೊದಲಾದವರಿದ್ದರು. 
ಉಡುಪಿ

ಕಾಸರಗೋಡು ಜಿಲ್ಲಾದ್ಯಂತ ವ್ರತ ಸಂಕಲ್ಪ ಯಾತ್ರೆ

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ 22ನೇ ವರ್ಷದ ಚಾತುರ್ವಾಸ್ಯ ವ್ರತಾಚರಣೆ ಜು.29ರಿಂದ ಸೆ.26ರ ತನಕ ಪಡುಕುತ್ಯಾರಿನ ಮಠದಲ್ಲಿ ಜರುಗಲಿದ್ದು, ಈ ನಿಟ್ಟಿನಲ್ಲಿ ಚಾತುರ್ವಾಸ್ಯ ವ್ರತ ಸಂಕಲ್ಪ ಯಾತ್ರೆ ಕಾಸರಗೋಡು ಜಿಲ್ಲೆಯಲ್ಲಿ ಪರ್ಯಟನೆ ನಡೆಸಿತು.
ಯಾತ್ರೆಯು ಬಂಗ್ರ ಮಂಜೇಶ್ವರದ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನ, ಆರಿಕ್ಕಾಡಿಯ ಕಾರ್ಲೆ ಶ್ರೀ ಕಾಳಿಕಾಂಬಾ ದೇವಸ್ಥಾನ ಹಾಗೂ ಕಾಞಂಗಾಡಿನ ಅಜಾನೂರು ಶ್ರೀಮದ್ ಪರಶಿವ ವಿಶ್ವಕರ್ಮ ದೇವಸ್ಥಾನಗಳಲ್ಲಿ ಶ್ರೀದೇವರ ದರ್ಶನ ಪಡೆದು, ಮಧೂರಿನ ಶ್ರೀ ಕಾಳಿಕಾಂಬಾ ಮಠದಲ್ಲಿ ಸಂಪನ್ನಗೊಂಡಿತು.
ಮಧೂರು ಕಾಳಿಕಾಂಬಾ ಮಠದಲ್ಲಿ ನಡೆದ ಸಮರಂಭದಲ್ಲಿ ಆನೆಗುಂದಿ ಮಠದ ಪ್ರತಿಷ್ಠಾನದ ವತಿಯಿಂದ ಮಧೂರು ಶ್ರೀ ಕಾಳಿಕಾಂಬಾ ಮಠದ ಪದಾಧಿಕಾರಿಗಳಿಗೆ ಚಾತುರ್ವಾಸ್ಯ ಮಹೋತ್ಸವದ ಆಮಂತ್ರಣ ಪತ್ರಿಕೆ ನೀಡಲಾಯಿತು.
ಧಾರ್ಮಿಕ ಸಭೆಯಲ್ಲಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಮಠದ ಅಧ್ಯಕ್ಷ ಎಂ.ಪುರುಷೋತ್ತಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು, ಅರವಿಂದ ವೈ. ಆಚಾರ್ಯ ಬೆಳುವಾಯಿ, ಗಣೇಶ ಆಚಾರ್ಯ ಕೆಮ್ಮಣ್ಣು, ಹರೀಶ್ ಆಚಾರ್ಯ ಹರೇಕಳ, ಜನಾರ್ದನ ಆಚಾರ್ಯ ಬಜಕೂಡ್ಲು, ಉಮೇಶ್ ಆಚಾರ್ಯ ಪುತ್ತೂರು, ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು, ವೈ.ಧಮೇರ್ಂದ್ರ ಆಚಾರ್ಯ ಕಾಸರಗೋಡು, ನೀರ್ಚಾಲು ಪರಮೇಶ್ವರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಕೆ.ಜಗದೀಶ ಆಚಾರ್ಯ ಕಂಬಾರು ಸ್ವಾಗತಿಸಿದರು. ಲೋಲಾಕ್ಷ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರುಷೋತ್ತಮ ಆಚಾರ್ಯ ಬದಿಯಡ್ಕ ವಂದಿಸಿದರು. ಬಾಲಕೃಷ್ಣ ಆಚಾರ್ಯ ಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ನಾಮರೂಪಗಳಲ್ಲಿ ಭಕ್ತರ ಕೋರಿಕೆಗಳನ್ನು ಈಡೇರಿಸುವ ಆದಿಶಕ್ತಿ ಮಹಾತಾಯಿ ಇಲ್ಲಿ ಕಾಳಿಕಾಂಬೆಯಾಗಿ ನೆಲೆಸಿದ್ದಾಳೆ. ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಧಾರ್ಮಿಕ ಪರಂಪರೆಯನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡು ಮಕ್ಕಳಿಗೂ ತಿಳಿಸಬೇಕು. ಸಂಸ್ಕಾರಯುತ ಪೀಳಿಗೆ ನಿರ್ವಾಣವಾದಾಗ ವಾತ್ರ ಸವಾಜ ಸುಭದ್ರವಾಗುತ್ತದೆ.

— ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ