ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಸ್ಕೃತೋತ್ಸವದಲ್ಲಿ ವಿಶ್ವಪ್ರಿಯ ಶ್ರೀ ಆಶೀರ್ವಚನ ನೀಡಿದರು. ಡಾ.ರಾಮು ಎಲ್., ಮುದರಂಗಡಿ ಶ್ರೀಶ ಭಟ್ಟ, ಡಾ. ಆನಂದ್ ಆಚಾರ್ಯ ಇದ್ದರು.
* ಅದಮಾರು ಮಠದ ವಿಶ್ವಪ್ರಿಯ ಶ್ರೀ ಆಶೀರ್ವಚನ
* ಪೂರ್ಣಪ್ರಜ್ಞ ಕಾಲೇಜ್ನಲ್ಲಿ ಸಂಸ್ಕೃತೋತ್ಸವ
ಉಡುಪಿ: ಸಂಸ್ಕಾರವುಳ್ಳ ಭಾಷೆಯೇ ಸಂಸ್ಕೃತ. ಸಂವಹನ ಮಾಡಲು ಹಲವು ಭಾಷೆಗಳಿದ್ದರೂ ಯಾವುದೇ ವಿಷಯ ತಿಳಿಸಲು ಸಂಸ್ಕೃತದಷ್ಟು ಸ್ಪಷ್ಟ, ನಿಖರತೆ ಇತರ ಭಾಷೆಗಳಿಗೆ ಸಾಧ್ಯವಿಲ್ಲ. ಸಂಸ್ಕೃತ ಮತ್ತು ಸಂಸ್ಕೃತಿ ಎರಡೂ ಮಾನವನಿಗೆ ಅಗತ್ಯ. ಭಾಷೆಗಳ ಸಂಸ್ಕಾರ ರೂಪವೇ ಸಂಸ್ಕೃತ ಎಂದು ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜ್ (ಸ್ವಾಯತ್ತ)ನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಶುಕ್ರವಾರ (ಆ.28) ಆಯೋಜಿಸಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಸ್ಕೃತಿಯೂ ಅಗತ್ಯ
ಉಡುಪಿಯ ಸಾಧ್ವಿ-ಮಾಧ್ವಿ ಮಹಾ ಪಾಠಶಾಲೆಯ ಪ್ರಾಧ್ಯಾಪಕ ವಿದ್ವಾನ್ ಮುದರಂಗಡಿ ಶ್ರೀಶ ಭಟ್ಟ ಮಾತನಾಡಿ, ಸಂಸ್ಕೃತ-ಸಂಸ್ಕೃತಿ ಎರಡೂ ಪರಸ್ಪರ ಸಂಬಂಧ ಹೊಂದಿರುವ ಪದ. ಮಾತಾ-ಪಿತಾ , ಧರ್ಮ-ಕರ್ಮ ಈ ರೀತಿಯ ಪ್ರಾಸಪದಗಳಲ್ಲಿ ಸಂಸ್ಕೃತಿಯುಕ್ತ ಅರ್ಥಗಳಿವೆ. ಹಾಗಾಗಿ ಸಂಸ್ಕೃತವು ಸಂಸ್ಕಾರಗೊಂಡ ಭಾಷೆಯೆಂದು ನಿರೂಪಿತವಾಗಿದೆ. ಈ ಭಾಷೆ ಬಲ್ಲವರ ವ್ಯಕ್ತಿತ್ವ ಹೆಚ್ಚುತ್ತದೆ. ಸುಸ್ಕೃಸತರಾಗಿ ಸಮೃದ್ಧ ಜೀವನ ನಡೆಸಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎಲ್. ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿಯರಾದ ನೂತನಾ, ಪ್ರತೀಕ್ಷಾ, ಶ್ರೀರಕ್ಷಾ ಸಂಸ್ಕೃತ ಗೀತೆ ಗಾಯನ ಮಾಡಿದರು. ಅಪೂರ್ವಾ ಹಾಗೂ ನಯನಾ ಪ್ರಾರ್ಥಿಸಿದರು. ವಿಭಾಗದ ಮುಖ್ಯಸ್ಥ ಡಾ. ಆನಂದ್ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಗುರುರಾಜ್ ಭಟ್ ವಂದಿಸಿದರು. ವಿದ್ಯಾರ್ಥಿನಿ ಮೇಧಿನಿ ಐತಾಳ್ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು ವಿಶ್ವವಿದ್ಯಾಲಯ ಹಾಗೂ ಪೂರ್ಣಪ್ರಜ್ಞ ಕಾಲೇಜ್ ನಡೆಸಿದ್ದ ಸಂಸ್ಕೃತ ಸೆಮಿಸ್ಟರ್ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಧೀನದ ಸಂಸ್ಕೃತ ನಿರ್ದೇಶನಾಲಯ ನಡೆಸಿದ್ದ ಕಾವ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಲಾಯಿತು. ಉಪನ್ಯಾಸಕಿ ಗಾಯತ್ರಿ ಎಸ್. ಸುವರ್ಣ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.