ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟಿಸಿದ ವಿಶ್ವಪ್ರಿಯ ತೀರ್ಥರು ಆಶೀರ್ವಚನ ನೀಡಿದರು. ಟಿ.ಪ್ರಶಾಂತ್ ಹೊಳ್ಳ, ಡಾ. ಅಮೃತೇಶ ಆಚಾರ್ಯ, ಡಾ. ಚಂದ್ರಕಾಂತ್ ಭಟ್, ಡಾ.ರಾಘವೇಂದ್ರ ಎಲ್., ಡಾ. ಪ್ರಜ್ಞಾ ಮಾರ್ಪಳ್ಳಿ, ವಿನಾಯಕ್ ಪೈ.ಬಿ. ವಿಶ್ವಾಸ್ ಕಾರ್ವಾಲೋ, ದೇವರಾಜ್ ಪುತ್ರನ್, ಪ್ರೀತಮ್ ಶೆಟ್ಟಿ, ಮೇಘಾ ಪದ್ಮಶಾಲಿ ಉಪಸ್ಥಿತರಿದ್ದರು.
* ಅದಮಾರು ವಿಶ್ವಪ್ರಿಯ ತೀರ್ಥ ಶ್ರೀಪಾದರ ಆಶೀರ್ವಚನ
* ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ
ಉಡುಪಿ: ಪ್ರಮಾಣಿಕತೆ, ಕೃತಜ್ಞತೆ ಇತ್ಯಾದಿ ಮೌಲ್ಯಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಭಗವಂತನ ವಾಣಿಯಾದ ಗೀತೆಯ ಓದುವಿಕೆಯಿಂದ ಅಂತ@ಸತ್ವ ಹೆಚ್ಚುತ್ತದೆ. ಅಧ್ಯಾತ್ಮದ ಚಿಂತನೆಯು ಜೀವನದಲ್ಲಿ ಮಹತ್ತರ ಪಾತ್ರ ವಹಿಸುವುದರಿಂದ ವಿದ್ಯಾರ್ಥಿಗಳೆಲ್ಲ ಭಗವಂತನ ಸ್ಮರಣೆ ಮಾಡುವುದು ಅತ್ಯಗತ್ಯ ಎಂದು ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಉಡುಪಿಯ ಸಂಸ್ಕೃತ ಕಾಲೇಜಿನ ಪ್ರಾಚಾರ್ಯ ಡಾ. ಅಮೃತೇಶ ಆಚಾರ್ಯ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಾಲೇಜಿನ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಪರಿಪೂರ್ಣತೆ ಸಾಧಿಸಲು ಸಾಧ್ಯ. ನಿಮ್ಮ ಸಾಧನೆಗಳಿಂದ ಸಂಸ್ಥೆಯ ಕೀರ್ತಿ ಹೆಚ್ಚಲಿ. ಸರಿಯಾದ ಗುರು ಮತ್ತು ಗುರಿಯ ಸ್ಪಷ್ಟತೆಯಿಂದ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಪ್ರಾಧ್ಯಾಪಕ ವಿನಾಯಕ್ ಪೈ.ಬಿ.
ವಜ್ರಮಹೋತ್ಸವದ ಲಾಂಛನ ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಿಗೆ ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್ ಪ್ರಮಾಣವಚನ ಬೋಧಿಸಿದರು.
ಪ್ರಾಧ್ಯಾಪಕ ವಿನಾಯಕ್ ಪೈ.ಬಿ.
ವಜ್ರಮಹೋತ್ಸವದ ಲಾಂಛನ ಬಿಡುಗಡೆ ಮಾಡಲಾಯಿತು.
ಆಡಳಿತ ಮಂಡಳಿಯ ಗೌರವ ಕಾರ್ಗದರ್ಶಿ ಸಿಎ ಟಿ.ಪ್ರಶಾಂತ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಡಾ.ರಾಘವೇಂದ್ರ ಎಲ್., ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವಾಸ್ ಕಾರ್ವಾಲೋ, ಉಪಾಧ್ಯಕ್ಷ ದೇವರಾಜ್ ಪುತ್ರನ್, ಕಾರ್ಯದರ್ಶಿ ಪ್ರೀತಮ್ ಶೆಟ್ಟಿ, ಉಪಕಾರ್ಯದರ್ಶಿ ಮೇಘಾ ಪದ್ಮಶಾಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿದರು. ಪ್ರಾಧ್ಯಾಪಕ ವಿನಾಯಕ್ ಪೈ.ಬಿ. ವಂದಿಸಿದರು. ನವ್ಯಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.