ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ವಿತರಿಸಲಾಯಿತು. ಪ್ರಮುಖರಾದ ಆಶಾ ಬಿ.ಶೆಟ್ಟಿ, ಟಿ.ಜಿ.ಆಚಾರ್ಯ, ದಿವಾಕರ ಮರಕಾಲ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಹೆಬ್ರಿ
ವಿಜಯವಾಣಿ ವಿದ್ಯಾರ್ಥಿ- ಉದ್ಯೋಗ ಮಿತ್ರದಲ್ಲಿ ಸಮಗ್ರ ಕಲಿಕೆಗೆ ಅವಕಾಶವಿದೆ. ಪತ್ರಿಕೆ ಸಾವಾಜಿಕ ಕಳಕಳಿಯೊಂದಿಗೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಪೂರಕ ಜ್ಞಾನವನ್ನು ತಲುಪಿಸುವ ಕೆಲಸ ಮಾಡುತ್ತಿದೆ. ಇದು ವಿದ್ಯಾರ್ಥಿಗಳ ಸದೃಢ ಭವಿಷ್ಯಕ್ಕೆ ಪೂರಕವಾಗಿದೆ ಎಂದು ಹೆಬ್ರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಆಶಾ ಬಿ.ಶೆಟ್ಟಿ ಹೇಳಿದರು.
ಶಾಂತಿನಿಕೇತನ ಸಹಕಾರದೊಂದಿಗೆ ಹೆಬ್ರಿ ಲಯನ್ಸ್ ಕ್ಲಬ್ ಪ್ರಾಯೋಜಕತ್ವದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರವನ್ನು ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿತರಿಸಿ ವಾತನಾಡಿದರು.
ಜಿಲ್ಲಾ ಲಯನ್ಸ್ ಸಂಯೋಜಕ ಟಿ.ಜಿ.ಆಚಾರ್ಯ ವಾತನಾಡಿದರು. ಉಪಪ್ರಾಂಶುಪಾಲ ದಿವಾಕರ ಮರಕಾಲ, ಲಯನ್ಸ್ ಪ್ರಮುಖರಾದ ನಾಗೇಶ್ ನಾಯಕ್ ಸೀತಾನದಿ, ಶಾಂತಿನಿಕೇತನದ ನರೇಂದ್ರ ಎಸ್.ಮರಸಣಿಗೆ ಇದ್ದರು.
ವಿದ್ಯಾರ್ಥಿಗಳಿಗೆ ಭವಿಷ್ಯದ ದೃಷ್ಟಿಯಲ್ಲಿ ವಿಜಯವಾಣಿ ಪತ್ರಿಕೆ ಬಹಳ ಉಪಯೋಗವಾಗಲಿದೆ. ಐಎಎಸ್, ಐಪಿಎಸ್ ಅಧಿಕಾರಿಗಳ ಕಥೆಗಳು ತಮ್ಮನ್ನು ಸಾಧನೆಯತ್ತ ಪ್ರೇರೇಪಿಸುತ್ತದೆ. ಉತ್ತಮವಾಗಿ ಓದಿ ಪ್ರಯೋಜನ ಪಡೆದುಕೊಂಡಾಗ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ. ಈ ಶಾಲೆ ಖಾಸಗಿ ಎತ್ತರಕ್ಕೆ ಬೆಳೆದಿರುವುದು ಹೆಮ್ಮೆ ಅನಿಸುತ್ತದೆ.