ಉಡುಪಿ ಇಂದ್ರಾಣಿಯ ಮುಖ್ಯಪ್ರಾಣ ದೇವಸ್ಥಾನದಲ್ಲಿ ವಿದ್ಯಾಸಾಗರ ಶ್ರೀಗಳು ಧಾರ್ಮಿಕ ಸಭೆ ಉದ್ಘಾಟಿಸಿದರು. ಭೂಪತಿ ಶೆಟ್ಟಿ, ಜಯಕರ್ ಶೆಟ್ಟಿ ಇಂದ್ರಾಳಿ, ಕೆ.ಪಿ.ಕುಮಾರಗುರು ತಂತ್ರಿ, ಬಿ.ಕುಶಲ್ ಶೆಟ್ಟಿ, ಕೆ.ರುಪತಿ ಭಟ್, ವಿಜಯ ರಾವ ರಾವ್. ಪಿ.ಜಿ. ಪಂಡಿತ್, ಪಾಂಡುರಂಗ ನಾಯಕ್, ಉಮೇಶ್ ಪೂಜಾರಿ, ಹೇಮನಾಥ್ ಹೆಗ್ಡೆ, ರಾಜೇಶ್ ನಾಯಕ್ ಇತರರಿದ್ದರು.
* ವಿದ್ಯಾಸಾಗರ ತೀರ್ಥ ಶ್ರೀಪಾದರ ಆಶೀರ್ವಚನ
* ಇಂದ್ರಾಣಿ ಮುಖ್ಯಪ್ರಾಣ ದೇಗುಲದಲ್ಲಿ ಮೊಕ್ತೇಸರರ ಸಂಗಮ
ಉಡುಪಿ: ಇಂದ್ರಾಣಿ ಕ್ಷೇತ್ರದಲ್ಲಿರುವ ಕುಂಡದಲ್ಲಿ ಸಚಿದೇವಿಯು ಸ್ನಾನ ಮಾಡಿ ದೇವರನ್ನು ಆರಾಧಿಸಿದ ಪುಣ್ಯ ತಾಣವಿದು. ದೇವತೆಗಳೇ ಇಲ್ಲಿ ದೇವರ ಆರಾಧನೆಯಿಂದ ಸಿದ್ಧಿ ಗಳಿಸಿದ ಕುರಿತು ಪುರಾಣದಲ್ಲಿ ಉಲ್ಲೇಖವಿದೆ. ಹೀಗಾಗಿ ಇತರೆಲ್ಲ ತಾಣಗಳಿಂದ ಇಂದ್ರಾಣಿ ಕ್ಷೇತ್ರ ಶ್ರೇಷ್ಠವಾಗಿದೆ. ಇಲ್ಲಿಯೇ ಭಗವತ್ಕಾರ್ಯ ಸಾಧಕನಾದ ಮುಖ್ಯಪ್ರಾಣನ ಸನ್ನಿಧಿಯಿದ್ದು, ಆತ ಕ್ಷೇತ್ರದ ಪಾವಿತ್ರ್ಯ ರಕ್ಷಕನಾಗಿದ್ದಾನೆ. ಪ್ರಾಣದೇವನು ದುಷ್ಟ ಶಕ್ತಿಗಳ ಎಲ್ಲ ಬಗೆಯ ಕಾಟ ನಾಶ ಮಾಡಿ, ಶಿಷ್ಟರಿಗೆಲ್ಲ ಮಾನಸಿಕ ಶಾಂತಿ ಅನುಗ್ರಹಿಸಲಿ ಎಂದು ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ತಿಳಿಸಿದರು.
ಉಡುಪಿಯ ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರ ಪುನ; ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ ಹಾಗೂ ಬ್ರಹ್ಮ ಕಲಶೋತ್ಸವದ ನಿಮಿತ್ತ ಸೋಮವಾರ (ಏ.6) ಸಂಜೆ ಆಯೋಜಿಸಿದ್ದ ಮೊಕ್ತೇಸರರ ಸಂಗಮ-ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾಪು ಮಾರಿಗುಡಿಯ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿದರು. ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ ಮಾತನಾಡಿದರು. ಇಂದ್ರಾಳಿ ಪಂಚದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಕುಶಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಆಡಳಿತ ಮುಖ್ಯಸ್ಥ ಕೆ.ರುಪತಿ ಭಟ್, ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಜಯ ರಾವ ರಾವ್. ಮಣಿಪಾಲದ ಪ್ರಸನ್ನ ಗಣಪತಿ ದೇಗುಲದ ಉಪಾಧ್ಯಕ್ಷ ಪಿ.ಜಿ. ಪಂಡಿತ್, ಮಣಿಪಾಲದ ವೈಷ್ಣವಿ ದುರ್ಗಾ ದೇಗುಲದ ಮೊಕ್ತೇಸರ ಜಯರಾಜ್ ಹೆಗ್ಡೆ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮಾಧವ ಬನ್ನಂಜೆ, ಕನ್ನರ್ಪಾಡಿಯ ಜಯದುರ್ಗಾ ಪರಮೇಶ್ವರಿ ದೇಗುಲದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಮಂಚಿ ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಶಿವಪಾಡಿ ಉಮಾಮಹೇಶ್ವರ ದೇಗುಲದ ಮೊಕ್ತೇಸರ ಮಹೇಶ್ ಠಾಕೂರ್, ಸಗ್ರಿ ಮಲೆಜುಮಾದಿ ದೈವಸ್ಥಾನದ ಜೀಣೋರ್ದ್ಧಾರ ಸಮಿತಿ ಅಧ್ಯಕ್ಷ ದೇವಿಚರಣ್ ಕಾವಾ, ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ, ಆನಂದ ನಾಯಕ್, ಅನಂತ ನಾಯಕ್, ದಯಾನಂದ್ ನಾಯಕ್, ಗೋಪಾಲ ಪೂಜಾರಿ, ದಿವಾಕರ ಶೆಟ್ಟಿ ತೋಟದಮನೆ, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.
ಇಂದ್ರಾಳಿ ಶ್ರೀಮುಖ್ಯಪ್ರಾಣ ದೇವರು ಹಾಗೂ ನಾಗ ದೇವರ ಗುಡಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಭೂಪತಿ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಪಾಂಡುರಂಗ ನಾಯಕ್, ಉಮೇಶ್ ಪೂಜಾರಿ, ಹೇಮನಾಥ್ ಹೆಗ್ಡೆ, ರಾಜೇಶ್ ನಾಯಕ್ ಪಾಲ್ಗೊಂಡಿದ್ದರು.
ವಸಂತಿ ನಾಯಕ್ ಪ್ರಾರ್ಥಿಸಿದರು. ಇಂದ್ರಾಣಿ ಮುಖ್ಯಪ್ರಾಣ, ನಾಗದೇವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಗುಡಿ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಸುಜಲಾ ಸತೀಶ್ ವಂದಿಸಿದರು.
ಸಭಾಕಾರ್ಯಕ್ರಮದ ಬಳಿಕ ಗುರುವಸಂತಿ ಸಾಂಸ್ಕೃತಿಕ ವೇದಿಕ ಮಣಿಪಾಲದ ವತಿಯಿಂದ 'ಬಿಕ್ರಮ ಭಜರಂಗಿ' ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.