ಓಮನ್ನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟ ಚೇತನ್ ಕುಲಾಲ್.
* ಓಮನ್ನಲ್ಲಿ ವಾಹನ ಅಪಘಾತ
* ಕಾಪು ಕಾಂಜರಕಟ್ಟೆಯ ಯುವಕ
ಉಡುಪಿ: ಓಮನ್ ದೇಶದಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಕಾಪು ತಾಲೂಕಿನ ಕಾಂಜರಕಟ್ಟೆಯ ಯುವ ಇಂಜಿನಿಯರ್ ಚೇತನ್ ಕುಲಾಲ್ (26) ಮೃತಪಟ್ಟಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು, 2016ರಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಗೆ ಸೇರ್ಪಡೆಗೊಂಡಿದ್ದರು. ಬಳಿಕ ಶ್ರೀನಿವಾಸ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿದ್ದರು.
ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕನಾಗಿ ಶೃಧ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದನು. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದು ತಂದೆಯೂ ಬೇರೆಯಾಗಿ ಇದ್ದಾರೆ. ಹೀಗಾಗಿ ದೊಡ್ಡಮ್ಮಳ ಆಶ್ರಯದಲ್ಲಿ ಬೆಳೆದಿದ್ದರು.
ಫೆ.8ರಂದು ಓಮನ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದು, ಸಹೋದರಿಯನ್ನು ಅಗಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಮಾಹಿತಿ ನೀಡಿದ್ದಾರೆ.