ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನಮಂದಿರದಲ್ಲಿ ವಸಂತ ವೇದ ಶಿಬಿರದ ಸಮಾರೋಪ ಜರುಗಿತು. ಪ್ರಮುಖರಾದ ಪ್ರಕಾಶ ಕಾರಂತ, ಎ.ಜಗದೀಶ ಕಾರಂತ, ರಘುನಾಥ ಸೋಮಯಾಜಿ ಮೊದಲಾದವರಿದ್ದರು. 
ಉಡುಪಿ

ವಸಂತ ವೇದ ಶಿಬಿರ ಸಮಾರೋಪ

Samiksha Sadananda Poojary

ಪ್ರಮುಖ ಮುಖ್ಯಾಂಶಗಳು

  • ವಸಂತ ವೇದ ಶಿಬಿರ
  • ಶ್ರೀವತ್ಸ, ಶ್ರೀಕಾಂತ ಹಾಗೂ ವರುಣ ಅವರಿಗೆ ಗೌರವ
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನಮಂದಿರದಲ್ಲಿ ವಸಂತ ವೇದ ಶಿಬಿರದ ಸಮಾರೋಪ ಇತ್ತೀಚೆಗೆ ಜರುಗಿತು.
ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಪ್ರಕಾಶ ಕಾರಂತ ಕೃತಜ್ಞತೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಸಿ.ಚಂದ್ರಶೇಖರ ಉಪಾಧ್ಯ ಶಿಬಿರದ ವರದಿ ಮಂಡಿಸಿದರು. ಸಹ ಪ್ರಬಂಧಕ ಗಣೇಶ ಭಟ್ ಶಿಬಿರಾರ್ಥಿಗಳಿಗೆ ಬಹುವಾನ ಮತ್ತು ಪ್ರವಾಣ ಪತ್ರ ಪಟ್ಟಿ ವಾಚಿಸಿದರು. ಕೂ.ಮ.ಜ.ಕೇಂದ್ರ ಸಂಸ್ಥೆ ಅಧ್ಯಕ್ಷ ಎಚ್.ಸತೀಶ ಹಂದೆ ಅಧ್ಯಕ್ಷತೆ ವಹಿಸಿದ್ದರು.
ಶಿಬಿರಾರ್ಥಿಗಳಾದ ಶ್ರೀವತ್ಸ, ಶ್ರೀಕಾಂತ ಹಾಗೂ ವರುಣ ಅವರನ್ನು ಸನ್ಮಾನಿಸಲಾಯಿತು. ದಾನಿ ಸುಧೀಂದ್ರ ಬೆಂಗಳೂರು, ಆಡಳಿತ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎ.ಜಗದೀಶ ಕಾರಂತ, ಉದ್ಯಮಿ ರಘುನಾಥ ಸೋಮಯಾಜಿ, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರಾದ ಕೆ.ತಾರಾನಾಥ ಹೊಳ್ಳ, ಚಂದ್ರಶೇಖರ ನಾವಡ, ಪ್ರಸನ್ನ ತುಂಗ, ಸಾಲಿಗ್ರಾಮ ಅಂಗಸಂಸ್ಥೆ ಕಾರ್ಯದರ್ಶಿ ಮಹಾಬಲ ಹೇರ್ಳೆ, ನಿಗವಾಗಮ ಶಾಲೆಯ ಶಿಕ್ಷಕ ವಾದಿರಾಜ ಐತಾಳ, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಪರಶುರಾಮ ಭಟ್, ಸಹಾಯಕ ಸಿಬ್ಬಂದಿ ಅಖಿಲೇಶ ಐತಾಳ ಮೊದಲಾದವರಿದ್ದರು.