ನೀರಿಲ್ಲದೆ ಗದ್ದೆಯನ್ನು ಉಳುಮೆ ಮಾಡಲು ಸಾಧ್ಯವಾಗದಿರುವುದು.
ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಹೆಬ್ರಿ ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ಗದ್ದೆಯಲ್ಲಿ ನೀರಿಲ್ಲದೆ ಸಸಿಗಳು ಒಣಗಿ ಹೋಗಿವೆ. ಹೀಗಾಗಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ತಾಲೂಕಿನ ಬಹುತೇಕ ರೈತರು ಭತ್ತದ ಕೃಷಿಯನ್ನೇ ಅವಲಂಬಿಸಿದ್ದಾರೆ. ವಿವಿಧ ಸಮಸ್ಯೆಗಳಿಂದ ಅನೇಕ ರೀತಿಯ ಸವಾಲುಗಳಿದ್ದರೂ ರೈತರು ಎದೆಗುಂದಿರಲಿಲ್ಲ. ಆದರೆ ಸರಿಯಾದ ಮಳೆ ಇಲ್ಲದೆ ನೀರು ಇಲ್ಲದೆ ಸಮಸ್ಯೆಯಾಗಿದೆ.
ಬಹುತೇಕರು ಮಳೆಯನ್ನು ನಂಬಿ ಬೆಟ್ಟುಗದ್ದೆಯ ಕೃಷಿ ವಾಡಿದ್ದಾರೆ. ಕೆಲವರಿಗೆ ನೀರು ಇಲ್ಲದೆ ಉಳುಮೆ ವಾಡಲು ಸಾಧ್ಯವಾಗಿಲ್ಲ. ಅನೇಕರು ಮಳೆಯನ್ನೇ ನಂಬಿ ಗದ್ದೆಗಳಲ್ಲಿ ಭತ್ತ ಬೇಸಾಯ ಮಾಡಿದ್ದು. ಸಂಪೂರ್ಣವಾಗಿ ಒಣಗಿ ಪೈರು ನಾಶವಾಗಿದೆ.
ಜನವರಿಯಿಂದ ಜುಲೈ 16ರವರೆಗೆ 2,053 ಮಿ.ಮೀ. ಮಳೆಯಾಗಬೇಕಾಗಿತ್ತು. 1,183 ಮಿ.ಮೀ. ಮಳೆಯಾಗಿದೆ. ಶೇ.42ರಷ್ಟು ಕೊರತೆ ಕಾಣುತ್ತಿದೆ. ವಾನ್ಸೂನ್ ಮಳೆ ವಾಡಿಕೆಯಲ್ಲಿ 1,852 ಮಿ.ಮೀ. ಆಗಬೇಕಾಗಿದ್ದು, 1,014 ಮಿ.ಮೀ. ಮಳೆಯಾಗಿ, ಶೇ.45 ಕೊರತೆ ಕಾಣುತ್ತಿದೆ. ಜುಲೈನಲ್ಲಿ 746 ಮಿ.ಮೀ. ಮಳೆ ಆಗಬೇಕಿತ್ತು. 456 ಮಿ.ಮೀ. ಮಳೆಯಾಗಿ ಶೇ.39 ಕೊರತೆ ಕಾಡಿದೆ.
ಹೆಚ್ಚಿನ ಗದ್ದೆಗಳು ಹಡಿಲು
ಬಹುತೇಕರು ನೀರಾವರಿ ನಂಬಿಕೊಂಡು ಕೃಷಿ ವಾಡುವುದರಿಂದ, ನೀರಿನ ತೊಂದರೆಯಿಂದ ಅನೇಕ ಗ್ರಾಮೀಣ ಭಾಗದ ರೈತರ ಗದ್ದೆಗಳು ಹಡಿಲು ಭೂಮಿಯಾಗಿ ವಾರ್ಪಾಡಾಗಲಿವೆ.
ಮಳೆ ಕೊರತೆಯಿಂದ ರೈತರಿಗೆ ಸಮಸ್ಯೆಯಾಗಿದೆ. ಬಹುತೇಕರ ಗದ್ದೆ ಒಣಗಿ ಹೋಗಿದೆ. ಗ್ರಾಮೀಣ ಭಾಗದಲ್ಲಿ ತುಂಡು ಭೂಮಿಯಲ್ಲಿ ಕೃಷಿ ಮಾಡುವ ರೈತನ ಸಮಸ್ಯೆ ಹೇಳತಿರದು. ಕೆಲವರಿಗೆ ನೀರಾವರಿ ಕೊರತೆಯಿಂದ ಉಳುಮೆ ಮಾಡಲು ಸಾಧ್ಯವಾಗಿಲ್ಲ.
— ಮಹೇಶ್ ಶೆಟ್ಟಿ ಕಾನ್ಬೆಟ್ಟು ಕುಚ್ಚೂರು ಹಾಲು ಉತ್ಪಾದಕರ ಸಹಕಾರಿ ಸಂ ಅಧ್ಯಕ್ಷc
ಸರ್ಕಾರದಿಂದ ಬರಗಾಲದ ಬಗ್ಗೆ ಸೂಕ್ತ ನಿರ್ದೇಶನವಿಲ್ಲ. ರೈತರು ಸಮಸ್ಯೆ ಅನುಭವಿಸಿದ್ದಲ್ಲಿ, ಇಲಾಖೆ ಗಮನಕ್ಕೆ ತಂದು, ಸೂಕ್ತ ಪರಿಹಾರ ಕಂಡುಕೊಳ್ಳಲು ಕ್ರಮ ವಹಿಸಲಾಗುವುದು.
— ಕೃಷ್ಣ, ಅಜೆಕಾರು ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ