ಉಡುಪಿಯ ವಳಕಾಡು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ವಿವಿಧ ಸಂಘ ಉದ್ಘಾಟಿಸಲಾಯಿತು. ಪ್ರೊ.ವಿಶ್ವನಾಥ ಕರಬ, ತಾರಾದೇವಿ, ಸುಜಾತಾ ನಾಯಕ್, ಪ್ರತಿಮಾ ನಾಯಕ್, ಶಿವರಾಮ್ ಶೆಟ್ಟಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
* ಪ್ರಾಂಶುಪಾಲ ವಿಶ್ವನಾಥ್ ಕರಬ ಕಿವಿಮಾತು
* ವಳಕಾಡು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ
ಉಡುಪಿ: ಶಾಲಾ ಹಂತದಲ್ಲಿ ವಿವಿಧ ಸಂಘ ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯು ಸುಂದರವಾಗಿ ಅನಾವರಣಗೊಳ್ಳುತ್ತದೆ. ಚಿಪ್ಪಿನೊಳಗಿನ ಮುತ್ತಿನಂತೆ ಸುಪ್ತವಾಗಿರುವ ಕೌಶಲ ಪ್ರಕಾಶಿಸುತ್ತದೆ. ಅದರಿಂದ ವ್ಯಕ್ತಿತ್ವವೂ ವಿಕಸನಗೊಳ್ಳುತ್ತದೆ. ಹೀಗಾಗಿ ಅಂತರ್ಜಾಲದ ಗುಂಗಿನಲ್ಲಿ ತಮ್ಮಲ್ಲಿರುವ ಸೃಜನಶೀಲತೆ ನಾಶಮಾಡಿಕೊಳ್ಳಬೇಡಿ ಎಂದು ತೆಂಕನಿಡಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜ್ನ ಪ್ರಾಂಶುಪಾಲ ವಿಶ್ವನಾಥ್ ಕರಬ ಕಿವಿಮಾತು ಹೇಳಿದರು.
ಉಡುಪಿಯ ವಳಕಾಡಿನಲ್ಲಿರುವ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ 2026&-27ನೇ ಸಾಲಿನ ವಿದ್ಯಾರ್ಥಿಗಳ ವಿವಿಧ ಸಂಘ ಉದ್ಘಾಟನೆ ಹಾಗೂ ಸಂಘಗಳ ಹೆಸರು, ಲೋಗೋ ಅನಾವರಣಗೊಳಿಸಿ ಮಾತನಾಡಿದರು.
ದೇಶದ ಕೀರ್ತಿ ಹೆಚ್ಚಿಸಿ
ವಿದ್ಯಾರ್ಥಿಗಳ ಪ್ರತಿಭೆ ತರಗತಿಯ ನಾಲ್ಕು ಗೋಡೆಯೊಳಗೆ ಬಂಧಿಯಾಗಿರಬಾರದು. ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳೆಲ್ಲರೂ ಸುಂದರ ಭಾರತದ ಸದೃಢ ಪ್ರಜೆಗಳಾಗಿ ಬಾಳಬೇಕು. ದೇಶದ ಕೀರ್ತಿ ಇನ್ನಷ್ಟು ಬೆಳಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಸಮಿತಿಯ ಸದಸ್ಯೆ ತಾರಾದೇವಿ ಉಪಸ್ಥಿತರಿದ್ದರು. ಹಿರಿಯ ಸಹ ಶಿಕ್ಷಕಿ ಸುಜಾತಾ ನಾಯಕ್ ಸ್ವಾಗತಿಸಿದರು. ಪ್ರತಿಮಾ ನಾಯಕ್ ವಂದಿಸಿದರು. ಶಿವರಾಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.