ವಿದ್ಯಾರ್ಥಿಗಳ ಪ್ರಾಜೆಕ್ಟ್ ಸ್ಪರ್ಧೆ ಮತ್ತು ಪ್ರದರ್ಶನ ನಡೆಯಿತು 
ಉಡುಪಿ

ವಿದ್ಯಾರ್ಥಿಗಳಿಂದ ವಿವಿಧ ಪ್ರಾಜೆಕ್ಟ್ ಪ್ರದರ್ಶನ

ಇಂದಿರಾ ಎನ್ ಕೆ
ಕಾರ್ಕಳ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಸ್ಪರ್ಧೆ ಮತ್ತು ಪ್ರದರ್ಶನವು ಇತ್ತೀಚೆಗೆ ಕಾಲೇಜಿನ ಪಠ್ಯೇತರ ಟಕ, ಹವ್ಯಾಸಿ ಪ್ರಾಜೆಕ್ಟ್ ಕ್ಲಬ್, ಐಎಸ್‌ಟಿಇ ವಿದ್ಯಾರ್ಥಿ ಟಕವು ಸಂಸ್ಥೆಯ ಇನ್‌ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್‌ನ ಸಹಯೋಗದೊಂದಿಗೆ ಆಯಾ ವಿಭಾಗಗಳಲ್ಲಿ ನಡೆಯಿತು.
ಮೆಕ್ಯಾನಿಕಲ್ ವಿಭಾಗದಿಂದ 7 ಪ್ರಾಜೆಕ್ಟ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಿಂದ 28, ಸಿವಿಲ್ ವಿಭಾಗದಿಂದ 2, ಕಂಪ್ಯೂಟರ್ ಸೈನ್ಸ್ ವಿಭಾಗದಿಂದ 49, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಡಾಟಾ ಸೈನ್ಸ್ ವಿಭಾಗದಿಂದ 14 ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೆಶಿನ್ ಲರ್ನಿಂಗ್ 16 ಪ್ರಾಜೆಕ್ಟ್‌ಗಳನ್ನು ವಿಭಾಗಗಳಲ್ಲಿ ಪ್ರದರ್ಶಿಸಲಾಯಿತು.
ಮೆಕ್ಯಾನಿಕಲ್‌ಇಂಜಿನಿಯರಿಂಗ್ ವಿದ್ಯಾರ್ಥಿಗಳು ನವೀಕರಿಸಬಹುದಾದ ಇಂಧನ, ಸೌರ ತಂತ್ರಜ್ಞಾನ, ನೀರು ಶುದ್ಧೀಕರಣ ಮತ್ತು ಕೃಷಿ ಯಾಂತ್ರೀಕರಣ ಕ್ಷೇತ್ರಗಳಲ್ಲಿ ತಮ್ಮ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಡೀಪ್ ಲರ್ನಿಂಗ್, ಬ್ಲಾಕ್‌ಚೈನ್, ಫೆಡರೇಟೆಡ್ ಲರ್ನಿಂಗ್ ಕಂಪ್ಯೂಟರ್ ವಿಷನ್ ಹಾಗೂ ಮೆಷಿನ್ ಲರ್ನಿಂಗ್ ಆಧಾರಿತ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು. ಆರ್ಟಿಫೀಸಿಯಲ್ ಇಂಟೆಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳು ಕೃಷಿ, ಭದ್ರತೆ, ಸಾರಿಗೆ ಮತ್ತು ಪರಿಸರ ಮೇಲ್ವಿಚಾರಣೆ ಕ್ಷೇತ್ರಗಳ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು.
ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳು ವಿಎಲ್‌ಎಸ್‌ಐ ವಿನ್ಯಾಸ, ರೋಬೋಟಿಕ್ಸ್ ಕ್ಷೇತ್ರಗಳ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸ್ಥಿರ ನಿರ್ವಾಣ ಸಾಮಗ್ರಿಗಳು ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು. ಸಂಸ್ಥೆ ಪ್ರಾಂಶುಪಾಲ ಡಾ.ನಾಗರಾಜ್ ಭಟ್ ಅವರು ಪ್ರಾಜೆಕ್ಟ್ ಪ್ರದರ್ಶನಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಪ್ರಾಜೆಕ್ಟ್‌ಗಳ ಕುರಿತು ಚರ್ಚಿಸಿದರು.