ಉಡುಪಿಯ ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ತರಬೇತಿ ಕೇಂದ್ರದ ಆವರಣದಲ್ಲಿ ವನಮಹೋತ್ಸವ ಆಚರಿಸಲಾಯಿತು. ಇಂದ್ರಾಳಿ ಜಯಕರ್ ಶೆಟ್ಟಿ, ಎನ್.ಎಂ. ಹೆಗಡೆ, ಹರಿಪ್ರಸಾದ್ ರೈ, ಆನಂದ್ ಬಿ. ಅಡಿಗ, ಸುಮನಾ ಶೇಖರ್, ಯತೀಶ್ ಕುಮಾರ್, ಅನೂಷಾ ಕೋಟ್ಯಾನ್, ರಾಜೇಶ್ ಶೇರಿಗಾರ್, ಪ್ರವಿಣಕುಮಾರ್ ಇತರರಿದ್ದರು.
* ವಿದ್ಯಾರ್ಥಿಗಳಿಗೆ ಇಂದ್ರಾಳಿ ಜಯಕರ್ ಶೆಟ್ಟಿ ಕಿವಿಮಾತು
* ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೇಂದ್ರದಲ್ಲಿ ವನಮಹೋತ್ಸವ
ಉಡುಪಿ: ಗಿಡಗಳನ್ನು ನೆಡುವುದಷ್ಟೇ ಕೆಲಸವಾಗಬಾರದು. ಅದನ್ನು ಬೆಳೆಸಿ, ಉಳಿಸುವುದೂ ಕರ್ತವ್ಯ ಆಗಬೇಕು. ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ರಸಿ, ಅವರಿಗೆ ಉತ್ತಮ ಪರಿಸ ನೀಡುವ ಜವಾಬ್ದಾರಿಯೂ ನಮ್ಮದು. ಮಕ್ಕಳೆಲ್ಲರೂ ತಾಯಿಯ ಹೆಸರಲ್ಲಿ ಗಿಡ ನೆಟ್ಟರೆ ಆ ಗಿಡದ ಮೇಲೂ ಸಹ ತಾಯಿಯ ಮೇಲಿರುವಷ್ಟೇ ಪ್ರೀತಿ ಉಂಟಾಗುತ್ತದೆ. ಗಿಡ-ಮರಗಳನ್ನೂ ತಾಯಿಯಂತೆಯೇ ಪ್ರೀತಿಸಬೇಕು ಎಂದು ವಿದ್ಯಾರ್ಥಿಗಳಿಗೆ ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ ಹೇಳಿದರು.
ಉಡುಪಿ ತಾಲೂಕಿನ ಪ್ರಗತಿ ನಗರದಲ್ಲಿರುವ ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ಡಾ. ವಿ.ಎಸ್. ಆಚಾರ್ಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ (ನಿ.) ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ (ನಿ.), ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಉಡುಪಿ, ಭಾರತಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ಉಡುಪಿ ಜಿಲ್ಲಾ ಸಂಸ್ಥೆ ಹಾಗೂ ಜಿಲ್ಲಾ ಸಹಕಾರ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಯನ್ ಪಿಡಿಜಿ ಎನ್.ಎಂ. ಹೆಗಡೆ, ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಖಜಾಂಚಿ ಹರಿಪ್ರಸಾದ್ ರೈ, ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ. ಅಡಿಗ, ರಾಜ್ಯ ಸಹಾಯಕ ಆಯುಕ್ತೆ ಸುಮನಾ ಶೇಖರ್, ಶುಭಾ, ಅಲೆವೂರು ಗ್ರಾಪಂ ಮಾಜಿ ಅಧ್ಯಕ್ಷ ಯತೀಶ್ ಕುಮಾರ್, ಯೋಗ ಶಿಕ್ಷಕಿಯರಾದ ಚೆನ್ನಮ್ಮ ಉಡುಪ, ಶೋಭಾ ಶೆಟ್ಟಿ, ಗೈಡ್ಸ್ ಕಮಿಷನರ್ ಉಡುಪಿಯ ಜ್ಯೋತಿ ಪೈ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿಯ ಜನರಲ್ ಮೆನೇಜರ್ ರಾಜೇಶ್ ಶೇರಿಗಾರ್ ಇತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನ ಸಿಇಒ ಅನೂಷಾ ಕೋಟ್ಯಾನ್ ಸ್ವಾಗತಿಸಿದರು. ಬಡಗಬೆಟ್ಟು ಸೊಸೈಟಿಯ ಮೆನೇಜರ್ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು. ಎಜಿಎಂ ಪ್ರವೀಣಕುಮಾರ್ ವಂದಿಸಿದರು.