ಕಾಪು ಕಡಲ ಪರ್ಬ ಸಮಾರೋಪದಲ್ಲಿ ಡಾ.ಬಿ.ದೇವದಾಸ್ ಕಾಮತ್, ಕುದಿ ಶ್ರೀನಿವಾಸ ಭಟ್ ಅವರಿಗೆ ಅಟಲ್ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.  
ಉಡುಪಿ

ಆದರ್ಶ ವ್ಯಕ್ತಿತ್ವದಿಂದ ವಾಜಪೇಯಿ ಇಂದಿಗೂ ಜೀವಂತ

ಪಡುಬಿದ್ರಿ: ಹಮ್ಮು ಬಿಮ್ಮು ಇಲ್ಲದ ಸರಳ ವ್ಯಕ್ತಿತ್ವದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಈಗ ನಮ್ಮೊಂದಿಗೆ ಇಲ್ಲವಾದರೂ ಅವರ ಆದರ್ಶ ವ್ಯಕ್ತಿತ್ವದಿಂದ ಅವರ ಇರುವಿಕೆಯನ್ನು ಇಂದಿಗೂ ಕಾಣುವಂತಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ಪ್ರಯುಕ್ತ ಬಿಜೆಪಿ ಕಾಪು ಮಂಡಲದ ವತಿಯಿಂದ ಕಾಪು ಬೀಚ್‌ನಲ್ಲಿ ಆಯೋಜಿಸಿದ್ದ ಕಡಲ ಪರ್ಬ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಜನ ಸಾಗರದ ನಡುವೆ ನಡೆಯುತ್ತಿರುವ ಕಾಪು ಕಡಲ ಪರ್ಬ ರಾಜ್ಯಮಟ್ಟದಲ್ಲಿ ಸದ್ದು ಮಾಡಿದಂತಹ ಅತ್ಯಂತ ಅಭೂತಪೂರ್ವ ಕಾರ್ಯಕ್ರಮವಾಗಿ ಮೂಡಿ ಬಂದಿದೆ ಎಂದು ಶ್ಲಾಘಿಸಿದರು.
ಡಾ.ಬಿ.ದೇವದಾಸ್ ಕಾಮತ್, ಕುದಿ ಶ್ರೀನಿವಾಸ ಭಟ್ ಅವರಿಗೆ ಅಟಲ್ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತನುಶ್ರೀ ಪಿತ್ರೋಡಿ, ದೀಕ್ಷಾ ವಿ., ಬಿಜೆಪಿ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಯಶ್‌ಪಾಲ್ ಎ.ಸುವರ್ಣ, ವಿ.ಸುನೀಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಧೀರಜ್ ಮುನಿರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಸಂದೀಪ್ ರವಿ, ದಿನಕರ ಬಾಬು, ನಿತಿನ್, ಲಾಲಾಜಿ ಆರ್.ಮೆಂಡನ್, ರೇಷ್ಮಾ ಶೆಟ್ಟಿ, ಶ್ರೀಕಾಂತ್ ನಾಯಕ್, ಸಂಧ್ಯಾ ರಮೇಶ್, ಶ್ಯಾಮಲಾ ಕುಂದರ್, ಕುತ್ಯಾರು ನವೀನ್ ಶೆಟ್ಟಿ, ಜಿತೇಂದ್ರ ಶೆಟ್ಟಿ, ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು, ಸಂತೋಷ್ ಮೂಡುಬೆಳ್ಳೆ, ಸೋನು ಪಾಂಗಾಳ, ನೀತಾ ಗುರುರಾಜ್, ಪಾರ್ಥಸಾರಥಿ, ಕೃಷ್ಣ ರಾವ್ ಉಪಸ್ಥಿತರಿದ್ದರು.