ವೈಶಾಖ ನಟನಂ-2026’ ರಾಷ್ಟ್ರೀಯ ನತ್ಯ ಉತ್ಸವ  
ಉಡುಪಿ

ದಾಖಲೆಗಳ ಪುಟ ಸೇರಿದ ವೈಶಾಖ ನಟನಂ

ಕಾಸರಗೋಡು: ಬೇಕಲ್ ಗೋಶಾಲೆಯಲ್ಲಿ ನಿರಂತರ ನಡೆದ ‘ವೈಶಾಖ ನಟನಂ-2026’ ರಾಷ್ಟ್ರೀಯ ನತ್ಯ ಉತ್ಸವ ಗಮನ ಸೆಳೆಯಿತು.
ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ 2,500ಕ್ಕೂ ಹೆಚ್ಚು ನತ್ಯ ಕಲಾವಿದರು ಪ್ರತಿಭೆಯನ್ನು ಅನಾವರಣಗೊಳಿಸಿದರು. ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ತಡರಾತ್ರಿಯವರೆಗೆ ನಿರಂತರವಾಗಿ ನಡೆದ ಈ ಕಲಾ ಪ್ರದರ್ಶನವು ಪ್ರತಿಷ್ಠಿತ India Book of Records ಮತ್ತು Asia Book of Records ಸಂಸ್ಥೆಗಳ ದಾಖಲೆಯ ಪುಟಗಳನ್ನು ಸೇರಿತು.
ಕಾರ್ಯಕ್ರಮಕ್ಕಾಗಿ ವಿಶೇಷವಾಗಿ ಮೂರು ಕಲಾ ವೇದಿಕೆಗಳನ್ನು ನಿರ್ಮಿಸಲಾಗಿತ್ತು. ಈ ವೇದಿಕೆಗಳ ಸುತ್ತಲೂ ಒಂಬತ್ತು ವಿಭಿನ್ನ ತಳಿಗಳ ದೇಸಿ ತಳಿಯ ಗೋವುಗಳು ಇದ್ದವು.
ಗೋಶಾಲೆ ಮತ್ತು ವಿಶ್ವದಾಖಲೆ ಬರೆದ ವೈಶಾಖ ನಟನಂ ಕಾರ್ಯಕ್ರಮವನ್ನು ಆಯೋಜಿಸಿದವರು ವಿಷ್ಣು ಪ್ರಸಾದ್ ಹೆಬ್ಬಾರ ಮತ್ತು ಸಂಶೋಧಕಿ ಡಾ.ನಾಗರತ್ನಾ ದಂಪತಿ. ಅವರಿಗೆ ಗೋವಾತೆಯ ಮೇಲಿರುವ ಅಪಾರ ಭಕ್ತಿ ಹಾಗೂ ದೇಸಿ ಗೋವುಗಳ ಸಂರಕ್ಷಣೆಯ ಕಾಳಜಿಯಿದೆ. ಈ ಗೋಶಾಲೆಯಲ್ಲಿ ಹಾಲು, ಬೆಣ್ಣೆಯನ್ನು ಮಾರಾಟ ಮಾಡುವುದಿಲ್ಲ.