ಪ್ರಧಾನಮಂತ್ರಿ ಶ್ರಮಯೋಗಿ ಮಾನ ಧನ (ಪಿಎಂಎಸ್‌ವೈಎಂ) ಅಸಂಟಿತ ಕಾರ್ಮಿಕರಿಗೆ ಕಾನೂನು ಅರಿವು ಹಾಗೂ ನೋಂದಣಿ ಅಭಿಯಾನ ಕುಂದಾಪುರದಲ್ಲಿ ನಡೆಯಿತು. ಪ್ರಮುಖರಾದ ಡಾ.ಪ್ರೇವಾನಂದ್, ಆನಂದ ಜೆ., ಸುವಾಸಿನಿ, ಚಿಕ್ಕು ಮತ್ತಿತರರಿದ್ದರು. 
ಉಡುಪಿ

ಕೇಂದ್ರ ಸರ್ಕಾರದ ಯೋಜನೆ ಸದುಪಯೋಗ

ಇಂದಿರಾ ಎನ್ ಕೆ
ಕುಂದಾಪುರ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ ಧನ(ಪಿಎಂಎಸ್ ವೈಎಂ) ಯೋಜನೆಯಡಿ ನೋಂದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಿ. ಇನ್ನಷ್ಟು ಹೆಚ್ಚೆಚ್ಚು ಅಸಂಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ನೋಂದಣಿ ಮಾಡಿಕೊಳ್ಳುವಂತಾಗಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರದ ಜೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಪುರಸಭೆ ಕುಂದಾಪುರ, ಕುಂದಾಪುರ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ ಧನ(ಪಿಎಂಎಸ್‌ವೈಎಂ) ಅಸಂಟಿತ ಕಾರ್ಮಿಕರಿಗೆ ಕಾನೂನು ಅರಿವು ಹಾಗೂ ನೋಂದಣಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
 ಕುಂದಾಪುರದ ಕಾರ್ಮಿಕ ನಿರೀಕ್ಷಕ ವಿಜೇಂದ್ರ ಕೆ., ಪಿಎಂಎಸ್ ವೈಎಂ ಯೋಜನೆ ಸೇರಿದಂತೆ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ, ಸಿಎಸ್‌ಸಿ ಸಹಯೋಗದೊಂದಿಗೆ ಪಿಎಂಎಸ್ ವೈಎಂ ಯೋಜನೆಯಡಿ ಅಸಂಟಿತ ಕಾರ್ಮಿಕರ(ಆಶಾ ಕಾರ್ಯಕರ್ತೆಯವರು, ಬೀದಿ ಬದಿ ವ್ಯಾಪಾರಸ್ಥರು ಮತ್ತು ಇತರ ಅಸಂಟಿತ ಕಾರ್ಮಿಕರು) ನೋಂದಣಿ ಪ್ರಕ್ರಿಯೆ ನಡೆಯಿತು.
 ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ್, ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಕುಂದಾಪುರ ತಾಲೂಕು ಆಶಾ ಕಾರ್ಯಕರ್ತೆಯರ ಸಂಘ ಅಧ್ಯಕ್ಷೆ ಸುವಾಸಿನಿ, ಬೀದಿ ಬದಿ ವ್ಯಾಪಾರಸ್ಥರ ಸಂ ಅಧ್ಯಕ್ಷೆ ಚಿಕ್ಕು, ಕಾರ್ಮಿಕ ಇಲಾಖೆ ಸಿಬ್ಬಂದಿ, ಪುರಸಭೆ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಕುಂದಾಪುರ ಪುರಸಭೆಯ ಸಿಬ್ಬಂದಿ ಗಣೇಶ್ ಜನ್ನಾಡಿ ನಿರೂಪಿಸಿದರು.