ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ನಾಗರತ್ನಾ ಆಚಾರ್ಯ, ಬಾಬು ಪೂಜಾರಿ, ಮಂಜಮ್ಮ ಪೂಜಾರಿ, ಗೀತಾಂಜಲಿ ಸುವರ್ಣ, ರಾಮ ಪೂಜಾರಿ ಮೊದಲಾದವರಿದ್ದರು. 
ಉಡುಪಿ

ಮನುಷ್ಯತ್ವ, ಮಾನವೀಯ ಗುಣ ಮೈಗೂಡಿಸಿಕೊಳ್ಳಲಿ

ಬೈಂದೂರು: ವಾನವ ಧರ್ಮದಲ್ಲಿ ಹುಟ್ಟಿದ ನಾವುಗಳು ಮುಖ್ಯವಾಗಿ ವಾನವೀಯತೆ ಮತ್ತು ಮನುಷ್ಯತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ತನ್ನ ಸಂಪಾದನೆಯ ಒಂದು ಭಾಗವನ್ನು ಬಡವರ ಅಭ್ಯುದಯಕ್ಕಾಗಿ ವಿನಿಯೋಗಿಸುತ್ತಿರುವುದು ದೇವರಿಗೂ ಪ್ರೀಯವಾದ ಕಾರ್ಯವಾಗಿದೆ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾವಾಜಿಕ ಕಳಕಳಿ ಹೊಂದಿರುವ ಗೋವಿಂದ ಬಾಬು ಪೂಜಾರಿ ಇವರು ತಮ್ಮ ಸತ್ಕಾರ್ಯಗಳ ಮೂಲಕ ಶ್ರೇಷ್ಠ ವಾನವರಲ್ಲಿ ಒಬ್ಬರಾಗಿದ್ದಾರೆ ಎಂದು ಏಕಜಾತಿ ಧರ್ಮಪೀಠ ದ್ವಾರಕವಾಯಿ ಮಠ ಶಂಕರಪುರದ ಶ್ರೀ ಸಾಯಿಈಶ್ವರ ಗುರೂಜಿ ಹೇಳಿದರು.
ಶಿರೂರು ಮೇಲ್ಪಂಕ್ತಿಯಲ್ಲಿ ಸೋಮವಾರ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿದ 18ನೇ ಮನೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಅವರು ಫಲಾನುಭವಿ ದುರ್ಗಿ ಮತ್ತು ಅವರ ಅಂಗವಿಕಲ ಪುತ್ರಿ ಆಶಾ ಪೂಜಾರಿ ಅವರಿಗೆ ಮನೆಯ ಕೀಲಿಕೈ ಹಸ್ತಾಂತರಿಸಿ ವಾತನಾಡಿ, ನಮ್ಮಲ್ಲಿರುವ ಸಂಪತ್ತಿನ ಒಂದಂಶವನ್ನು ದಾನ ವಾಡುವುದರಿಂದ ಸಂತೃಪ್ತಿಯ ಜತೆಗೆ ಸೇವೆಯ ಸಾರ್ಥಕತೆ ದೊರೆಯುತ್ತದೆ. ಮತ್ತಷ್ಟು ಕಾರ್ಯಗಳು ಟ್ರಸ್ಟ್ ಮೂಲಕ ನಡೆಯಲಿದೆ ಎಂದರು.
ಟ್ರಸ್ಟ್‌ನ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶಿರೂರು ಗ್ರಾ.ಪಂ. ಅಧ್ಯಕ್ಷೆ ನಾಗರತ್ನಾ ಆಚಾರ್ಯ, ಬಿಜೂರು ಚಮ್ಮನಹಿತ್ಲು ಬಾಬು ಪೂಜಾರಿ, ಮಂಜಮ್ಮ ಪೂಜಾರಿ, ಜಿಲ್ಲಾ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಕಲ್ಯಾಣಪುರ ಬಿಲ್ಲವ ಸವಾಜ ಸೇವಾ ಸಂ ಅಧ್ಯಕ್ಷ ರಾಮ ಪೂಜಾರಿ, ಬೈಂದೂರು ರೈತ ಸಂದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುವಾರ್ ಶೆಟ್ಟಿ ಇದ್ದರು. ಅರುಣ್ ಕುವಾರ್ ಶಿರೂರು ನಿರೂಪಿಸಿದರು. ನಾಗರಾಜ ಪಿ.ಯಡ್ತರೆ ವಂದಿಸಿದರು.