ಕೃಷ್ಣ ಮಠದಲ್ಲಿ ಪರ್ಯಾಯ ಶೀರೂರು ಮಠದ ದಿವಾನ್​ ಡಾ. ಉದಯ್​ ಕುಮಾರ್​ ಸರಳ್ತಾಯ ನೇತೃತ್ವದಲ್ಲಿ ಋಗು ಉಪಾಕರ್ಮ ನೆರವೇರಿತು.  
ಉಡುಪಿ

ಜಿಲ್ಲೆಯಲ್ಲಿ ಋಗು ಉಪಾಕರ್ಮ ಆಚರಣೆ

ಗೋಪಾಲಕೃಷ್ಣ ಪಾದೂರ್
ಉಡುಪಿ: ಜಿಲ್ಲೆಯಾದ್ಯಂತ ಪ್ರಸಿದ್ಧ ದೇವಸ್ಥಾನ, ಮಠ-, ಮಂದಿರಗಳಲ್ಲಿ ಬುಧವಾರ ಋಗು ಉಪಾಕರ್ಮ (ಯಜ್ಞೋಪವೀತ ಧಾರಣೆ) ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು.

ಅದಮಾರು ಮಠದಲ್ಲಿ ವಿದ್ವಾನ್​ ವಂಶಿಕೃಷ್ಣಾಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿತು. ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ವೈದಿಕರು ಹಾಗೂ ಭಕ್ತರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿದರು.