ಎಸ್.ಆರ್ ಆಂಗ್ಲ ಮಾಧ್ಯಮ ಶಾಲೆ ಟ್ಯಾಲೆಂಟ್ ಫೆಸ್ಟ್ ಕಾರ್ಯಕ್ರಮವನ್ನು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಉದ್ಘಾಟಿಸಿದರು. ಪ್ರಮುಖರಾದ ಸಪ್ನಾ ಎನ್.ಶೆಟ್ಟಿ, ಭಗವತಿ, ದೀಪಕ್ ಎನ್., ಗೋಪಾಲ್ ಆಚಾರ್ಯ, ಸುಚಿತ್ರ, ವಿನಯಾ ಉಪಸ್ಥಿತರಿದ್ದರು.  
ಉಡುಪಿ

ಪಾಠ ಕಲಿಕೆ ಜತೆ ಪ್ರತಿಭೆ ಅನಾವರಣ

ಇಂದಿರಾ ಎನ್ ಕೆ

ಹೆಬ್ರಿ: ವಿದ್ಯಾರ್ಥಿಗಳು ಪಠ್ಯಪುಸ್ತಕದ ಪಾಠ ಕಲಿಯುವುದರ ಜತೆಗೆ ವಿವಿಧ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯ. ಸಿಕ್ಕಿರುವ ಅವಕಾಶ ಸಮರ್ಪಕವಾಗಿ ಬಳಸಿಕೊಂಡು ಪ್ರತಿಭೆ ಪ್ರದರ್ಶನ ಮಾಡಬೇಕು ಎಂದು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಹೇಳಿದರು.

ಎಸ್.ಆರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಟ್ಯಾಲೆಂಟ್ ಫೆಸ್ಟ್ ಉದ್ಘಾಟಿಸಿ ಮಾತನಾಡಿದರು. ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಪ್ನಾ ಎನ್.ಶೆಟ್ಟಿ ಮಾತನಾಡಿದರು. ಎಸ್.ಆರ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಭಗವತಿ, ಉಪಪ್ರಾಂಶುಪಾಲ ದೀಪಕ್ ಎನ್., ಎಸ್.ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಗೋಪಾಲ್ ಆಚಾರ್ಯ, ಕೋ-ಆರ್ಡಿನೇಟರ್ ಸುಚಿತ್ರ, ವಿನಯಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಾದ ವೈಭವ್ ನಿರೂಪಿಸಿದರು. ಮನೀಶ್ ಬಾಬು ಸ್ವಾಗತಿಸಿದರು. ಶಮಿತಾ ವಂದಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವಿಶಿಷ್ಟ ಪ್ರತಿಭೆ ಅಡಗಿದೆ. ಸೂಕ್ತ ವೇದಿಕೆ ದೊರೆತಾಗ ಅದು ತಿಳಿಯುತ್ತದೆ. ಪ್ರತಿಯೊಬ್ಬರು ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.

— ಸಪ್ನಾ ಎನ್.ಶೆಟ್ಟಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ