ಕೆಸರ್‌ಡೊಂಜಿ ದಿನ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕ ಗಣೇಶ್ ಭಟ್ ಉದ್ಘಾಟಿಸಿದರು. ಹರ್ಷರಾಜ್ ಮುದ್ಯ, ಸುರೇಶ್ ಭಟ್ನಗರ ಇನ್ನಿತರರು ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಹಿಂದೂ, ಮುಸ್ಲಿಂ, ಕ್ರೈಸ್ತರೆಂದು ಲೆಕ್ಕಾಚಾರ ಹಾಕಿ ಕೂತರೆ ಸಮಾಜದಲ್ಲಿ ಒಗ್ಗಟ್ಟು ಕಾಪಾಡಲು ಅಸಾಧ್ಯ. ಕೆಸರ್ಡೊಂಜಿ ದಿನ ಕಾರ್ಯಕ್ರಮ ಮೂಲಕ ಎಲ್ಲ ಸಮುದಾಯವನ್ನು ಒಂದೆಡೆ ಸೇರಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಬಲಗೊಳಿಸುವ ಕಾರ್ಯ ನಡೆದಿದೆ ಎಂದು ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಅಭಿಪ್ರಾಯಪಟ್ಟರು.
ಮಾಡೂರು ಸರ್ಕಾರಿ ಶಾಲಾ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಬಲ್ಯ ಬಾಳಿಕೆ ಅರಸು ಮಂಜಿಷ್ಣಾರ್ ದೈವಸ್ಥಾನ ಎದುರಿನ ಬಾಕಿಮಾರ್ ಗದ್ದೆಯಲ್ಲಿ ಭಾನುವಾರ ಕೆಸರ್ಡೊಂಜಿ ದಿನ ವಿವಿಧ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊಂಡಾಣ ಶ್ರೀ ಪಿಲಿಚಾಮುಂಡಿ, ಬಂಟ, ಮುಂಡತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಹರ್ಷರಾಜ್ ಮುದ್ಯ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಉದ್ಯಮಿ ಹರೀಶ್ ಮಡ್ಯಾರ್, ಕೋಟೆಕಾರ್ ಪ.ಪಂ. ಸದಸ್ಯ ಹರೀಶ್ ರಾವ್, ಮಾಡೂರು ಸರ್ಕಾರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭಾಸ್ಕರ ಮಡ್ಯಾರ್, ಮುಖ್ಯಶಿಕ್ಷಕಿ ಪುಷ್ಪಾ, ಅರಸು ಚಾರಿಟೆಬಲ್ ಟ್ರಸ್ ಅಧ್ಯಕ್ಷ ಮೋಹನ್ ಪೂಜಾರಿ, ಅರಸು ಫ್ರೆಂಡ್ಸ್ ಅಧ್ಯಕ್ಷ ಮಹೇಶ್ ರಾವ್ ಮಾಡೂರು, ಬೀರಿ ನಮೋ ಫ್ರೆಂಡ್ಸ್ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಶಾಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಶೀದ್ ಮಾಡೂರು, ಗೌರವಾಧ್ಯಕ್ಷ ಅಝೀಝ್ ಮಾಡೂರು, ಕಾರ್ಯಕ್ರಮ ಸಂಚಾಲಕ ಶಶಿಧರ್ ಮಾಡೂರು, ಉಳ್ಳಾಲ ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ಮಿತೇಶ್ ಪೂಜಾರಿ, ಉದ್ಯಮಿ ಪ್ರಕಾಶ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಜಾತ ಸ್ವಾಗತಿಸಿದರು. ಕಾರ್ಯಕ್ರಮ ಸಂಘಟಕ ಸುಜಿತ್ ಮಾಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಜೀವಿತಾ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ, ಗೌರವಾರ್ಪಣೆ
ನಿವೃತ್ತ ಯೋಧರಾದ ಕರ್ನಲ್ ಬಸವರಾಜ್, ಸದಾನಂದ ಶೆಟ್ಟಿ ಸುಧಾಕರ ಕುಂಪಲ, ರಾಜೇಶ್ ಕುಮಾರ್ ಕೆ., ಪ್ರಭಾಕರ್, ಅಮ್ರಿಕ್ ಸಿಂಗ್, ಸುರೇಶ್, ರಂಜಿತ್, ಹರಿಪ್ರಸಾದ್ ಕೆ., ಪೂರ್ಣೇಶ್, ವರ್ಗಿಸ್, ವಿಜಯನ್, ಪ್ರಗತಿಪರ ಕೃಷಿಕ ಗಂಗಾಧರ್ ಅಜಿಲ ಹಾಗೂ ಕೌನ್ಸಿಲರ್ ಕಿರಣ್ ಮಾಡೂರು ಅವರನ್ನು ಸನ್ಮಾನಿಸಲಾಯಿತು.