ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಉಜಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಮಾಲೋಚನಾ ಸಭೆ ನಡೆಯಿತು. ಪ್ರಮುಖರಾದ ಶರತ್ ಕೃಷ್ಣ ಪಡುವೆಟ್ನಾಯ, ರಾಮಣ್ಣ ಗೌಡ, ಪ್ರವೀಣ್ ಕುಮಾರ್, ಧೀರಜ್ ಕುಂಜರ್ಪ ಉಪಸ್ಥಿತರಿದ್ದರು.  
ಉಡುಪಿ

ಸೆ.14ರಿಂದ ಉಜಿರೆ ಸಾರ್ವಜನಿಕ ಗಣೇಶೋತ್ಸವ

ಬೆಳ್ತಂಗಡಿ: ಉಜಿರೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 20ನೇ ವರ್ಷದ ಶ್ರೀ ಗಣೇಶೋತ್ಸವ ಮುಂದಿನ ಸೆ.14 ರಿಂದ 16ರವರೆಗೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದೆ ಎಂದು ಶ್ರೀ ಜನಾರ್ದನ ಸ್ವಾಮಿ ದೇವಳ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.
ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಇತ್ತೀಚೆಗೆ ಉಜಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಶ್ರೀ ಗಣೇಶೋತ್ಸವ ಆಚರಣೆ ಪೂರ್ವಭಾವಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಣಪತಿ ಹೋಮ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಆಟೋಟ ಸ್ಪರ್ಧೆಗಳು, ಅನ್ನಸಂತರ್ಪಣೆ, ಪ್ರಸಾದ ತಯಾರಿ ಹಾಗೂ ವಿತರಣೆ, ಪೇಟೆ ಅಲಂಕಾರ, ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಶೋಭಾಯಾತ್ರೆ ನಿರ್ವಹಣೆ ಜವಾಬ್ದಾರಿ ಸದಸ್ಯರಿಗೆ ವಹಿಸಿಕೊಡಲಾಯಿತು. ಆಮಂತ್ರಣ ಪತ್ರಿಕೆ ಜು.30ರಂದು ಬಿಡುಗಡೆಗೊಳಿಸಿ ವಿತರಣೆಯ ಜವಾಬ್ದಾರಿ ಹಂಚಲಾಗುವುದು ಎಂದರು.
ಸಮಿತಿ ಅಧ್ಯಕ್ಷ ರಾಮಣ್ಣ ಗೌಡ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಕೋಶಾಧಿಕಾರಿ ಧೀರಜ್ ಕುಂಜರ್ಪ ಉಪಸ್ಥಿತರಿದ್ದರು. ಸಮಿತಿ ನಿಕಟಪೂರ್ವ ಅಧ್ಯಕ್ಷ ಅರವಿಂದ ಕಾರಂತ್ ವಂದಿಸಿದರು. ಗೋಪಾಲಕೃಷ್ಣ ಜಿ.ಕೆ. ಸ್ವಾಗತಿಸಿ, ನಿರೂಪಿಸಿದರು.