ಯುವ ಲೇಖಕಿ ಉಡುಪಿಯ ಫಾತಿಮಾ ರಲಿಯಾ.
* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪುರಸ್ಕಾರ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ ಮೂಲಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೀಡುವ 2024ನೇ ಸಾಲಿನ ಮಯೂರ ವರ್ಮ ಸಾಹಿತ್ಯ ದತ್ತಿ ಪ್ರಶಸ್ತಿಗೆ ಯುವ ಲೇಖಕಿ ಫಾತಿಮಾ ರಲಿಯಾ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 25 ಸಾವಿರ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ. ದ.ಕ. ಜಿಲ್ಲೆಯ ಪೆರ್ನೆ ದೋರ್ಮೆಯ ಅಬ್ದುಲ್ ರಶೀದ್ ಮತ್ತು ಆಯಿಶಾ ದಂಪತಿ ಪುತ್ರಿಯಾಗಿರುವ ಫಾತಿಮಾ, ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಪುತ್ರಿ ಹಾಗೂ ಪತಿ ಅಬ್ದುಲ್ ಅಝೀಝ್ ಅವರೊಂದಿಗೆ ವಾಸವಾಗಿದ್ದಾರೆ.
ಕಡಲು ನೋಡಲು ಹೋದವಳು, ಒಡೆಯಲಾರದ ಒಡಪು, ಅವಳ ಕಾಲು ಸೋಲದಿರಲಿ, ಕೀಮೋ, ಅನುವಾದಿತ ಮಕ್ಕಳ ಕಥೆ 'ಹಿಪ್ಪೋಗೆ ಕುಣಿಯೋ ಆಸೆ' ಕೃತಿಗಳನ್ನು ರಚಿಸಿದ್ದಾರೆ.
ಫಾತಿಮಾ ಅವರಿಗೆ ಶಿವಮೊಗ್ಗದ ಕರ್ನಾಟಕ ಸಂಘದ ಲಂಕೇಶ್ ಪ್ರಶಸ್ತಿ, ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಇಂದಿರಾ ದತ್ತಿ ಪ್ರಶಸ್ತಿ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.