ವಿವಿಧ ಕ್ಷೇತ್ರಗಳ ಸಾಧಕರಿಗೆ ಸ್ವಾತಂತ್ರ್ಯೋತ್ಸವ ಸಮ್ಮಾನ ಮಾಡಲಾಯಿತು. ವಿನಯಕುಮಾರ್ ಸೊರಕೆ, ಅಬ್ದುಲ್ ಜಲೀಲ್ ಸಾಹೇಬ್, ಪಿ.ವಿ. ಮೋಹನ್, ಡಾ.ವಾಸುದೇವ ಬೆಳ್ಳೆ, ಫಾತಿಮಾ ರಲಿಯಾ, ಉದ್ಯಾವರ ನಾಗೇಶಕುಮಾರ್, ಗಿರೀಶ್ ಗುಡ್ಡೆಯಂಗಡಿ, ಸುಹೇಲ್ ರಹಮತುಲ್ಲ ಇತರರಿದ್ದರು.
* ಮಾಜಿ ಸಚಿವ ವಿನಯಕುಮಾರ್ ಸೊರಕೆ ಅನಿಸಿಕೆ
* ಯುಎಫ್ಸಿಯಿಂದ ಸ್ವಾತಂತ್ರ್ಯೋತ್ಸವ ಸಮ್ಮಾನ
ಉಡುಪಿ: ವಿವಿಧ ಕ್ಷೇತ್ರಗಳ ಸಾಧಕರನ್ನು ಸಾರ್ವಜನಿಕವಾಗಿ ಗೌರವಿಸಿದರೆ ಅದು ಯುವ ಸಮುದಾಯಕ್ಕೆ ಪ್ರೇರಣೆಯಾಗಲಿದೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಯುವ ಸಾಧಕರನ್ನು ಗೌರವಿಸಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಅನಿಸಿಕೆ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಉದ್ಯಾವರದಲ್ಲಿ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯಾದ ಉದ್ಯಾವರ ಫ್ರೆಂಡ್ಸ್ ಸರ್ಕಲ್ (ಯುಎಫ್ಸಿ) ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆ 36ನೇ ರಾಷ್ಟ್ರೀಯ ಮಟ್ಟದ 19ರ ವಯೋಮಾನದೊಳಗಿನ ಬಾಲಕಿಯರ ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಉದ್ಯಾವರದ ರಮೇಶಕುಮಾರ್ ಮತ್ತು ವನಿತಾ ದಂಪತಿ ಪುತ್ರಿ ಹಾಗೂ ಬ್ರಹ್ಮಾವರದ ಜಿಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನ 10ನೇ ತರಗತಿ ವಿದ್ಯಾರ್ಥಿನಿ ಹಂಸಿಕಾ ಆರ್ ಪೂಜಾರಿ, ಹೈದರಾಬಾದ್ನಲ್ಲಿ ನಡೆದ ರಾಷ್ಟ್ರೀಯ ಇಕ್ವಿಪ್ಡ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಪದಕ ಗಳಿಸಿದ ಪಿತ್ರೋಡಿಯ ರೋಶನ್ ಕರ್ಕಡ ಮತ್ತು ಸುಮಂಗಲಾ ಅವರ ಪುತ್ರ ಹಾಗೂ ಬ್ರಹ್ಮಾವರ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನ್ಮೋಲ್ ಬೆನಡಿಕ್ಟ್ ಕರ್ಕಡ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ವ್ಯಾಪ್ತಿಯಲ್ಲಿ ಕಳೆದ ವರ್ಷ ನಡೆದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಎಂಬಿಬಿಎಸ್ ಪದವಿ ಗಳಿಸಿದ ಯು.ಪದ್ಮನಾಭ ಕಾಮತ್ ಮತ್ತು ಡಾ. ಸವಿತಾ ಪಿ. ಕಾಮತ್ ಸುಪುತ್ರಿ ಹಾಗೂ ಕಾರವಾರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ವಿದ್ಯಾರ್ಥಿನಿ ಡಾ.ಪವಿತ್ರಾ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ನಿರ್ದೇಶಕ ಅಬ್ದುಲ್ ಜಲೀಲ್ ಸಾಹೇಬ್, ವಿಪ ಸದಸ್ಯ ಪಿ.ವಿ. ಮೋಹನ್, ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ, ಲೇಖಕಿ ಫಾತಿಮಾ ರಲಿಯಾ ಉಪಸ್ಥಿತರಿದ್ದರು.
ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶಕುಮಾರ್, ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ, ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತುಲ್ಲ, ಕೋಶಾಧಿಕಾರಿ ಸತೀಶ್ ಡಿ. ಸಾಲಿಯಾನ್, ಉಪಾಧ್ಯಕ್ಷ ಶ್ರೀಧರ್ ಮಾಬಿಯಾನ್, ಕಾರ್ಯದರ್ಶಿ ಆಶಾ ವಾಸು, ಲೆಕ್ಕ ಪರಿಶೋಧಕ ತಿಲಕರಾಜ್ ಸಾಲಿಯಾನ್, ಮಾಜಿ ಅಧ್ಯಕ್ಷ ಸೋಮಶೇಖರ್ ಸುರತ್ಕಲ್ ಇನ್ನಿತರರು ಪಾಲ್ಗೊಂಡಿದ್ದರು.