ಉಡುಪಿಯ ಪ್ರತಿಭಾವಂತ ಗಾಯಕಿ ಪ್ರಜ್ಞಾ ಅಡಿಗ. 
ಉಡುಪಿ

'ರಾಗಧನ ಪಲ್ಲವಿ' ಪ್ರಶಸ್ತಿಗೆ ಪ್ರಜ್ಞಾ ಅಡಿಗ ಆಯ್ಕೆ

* ಫೆ.7ರಂದು ಉಡುಪಿಯಲ್ಲಿ ಪ್ರದಾನ

ಉಡುಪಿ: ಪ್ರಸಿದ್ಧ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಸ್ಮರಣಾರ್ಥ ಉಡುಪಿಯ ರಾಗಧನ ಸಂಸ್ಥೆಯ ಮೂಲಕ ನೀಡಲಾಗುವ 'ರಾಗಧನ ಪಲ್ಲವಿ' ಪ್ರಶಸ್ತಿಗೆ ಉಡುಪಿಯ ಪ್ರತಿಭಾವಂತ ಗಾಯಕಿ ಪ್ರಜ್ಞಾ ಅಡಿಗ ಆಯ್ಕೆಯಾಗಿದ್ದಾರೆ.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಫೆ.7ರಂದು ಸಂಜೆ 5:30ಕ್ಕೆ ಆಯೋಜಿಸಿರುವ 38ನೇ ವರ್ಷದ ಶ್ರೀಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ಡಾ. ಗಣಪತಿ ಜೋಯಿಸ್​ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 
ಸಂಸ್ಥೆಯ ಅಧ್ಯಕ್ಷ ಡಾ.ಕಿರಣ್​ ಹೆಬ್ಬಾರ್​ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪ್ರಜ್ಞಾ ಅಡಿಗ ಅವರಿಂದ 'ರಾಗಂ ತಾನಂ ಪಲ್ಲವಿ' ಎಂಬ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ರಾಗಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.