ಶ್ರೀ ಗಣೇಶೋತ್ಸವ ಸಮಿತಿ ಭಕ್ತವೃಂದ ಮಾರುತಿ ವೀಥಿಕಾ ಉಡುಪಿಯ ಪಂಚ ಹಸಿರೆಲೆ ಗಣಪ.
* ಶ್ರೀ ಗಣೇಶೋತ್ಸವ ಸಮಿತಿ ಭಕ್ತವೃಂದ ಮಾರುತಿ ವೀಥಿಕಾ ಉಡುಪಿ
ಉಡುಪಿ: ಶ್ರೀ ಗಣೇಶೋತ್ಸವ ಸಮಿತಿ ಭಕ್ತವೃಂದ ಮಾರುತಿ ವೀಥಿಕಾ ಉಡುಪಿಯ 26ನೇ ವರ್ಷದ ಗಣೇಶೋತ್ಸವ ಈ ಬಾರಿ ಪರಿಸರಸ್ನೇಹಿಯಾಗಿದೆ. ಚೌತಿಯಂದು ಪೂಜಿಸಲ್ಪಡುವ ಗಣಪತಿಯನ್ನು ವಿಶೇಷ ಹಾಗೂ ಆಕರ್ಷಾತ್ಮಕವಾಗಿ ಸಿದ್ಧಪಡಿಸಲಾಗಿದೆ.
ಪೂಜಾ ಸಮಯದಲ್ಲಿ ಸುವಸ್ತುವಾಗಿ ಬಳಸುವ ಮಾವಿನ ಎಲೆ. ವೀಳ್ಯದೆಲೆ. ಎಕ್ಕದ ಎಲೆ, ಬಾಳೆಎಲೆ ಹಾಗೂ ಹಲಸಿನ ಎಲೆಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.
ಉಡುಪಿ ಕಿನ್ನಿಮೂಲ್ಕಿಯ ದಿ. ಸದಾಶಿವ್ ಆಚಾರ್ಯ ಅವರ ಪುತ್ರರಾದ ಕಾರ್ತಿಕ್ ಆಚಾರ್ಯ ಹಾಗೂ ಕೌಶಿಕ್ ಆಚಾರ್ಯ ಅವರ ಕೈಚಳಕದಲ್ಲಿ ಈ ಗಣಪ ಮೂಡಿ ಬಂದಿದ್ದಾನೆ. ಗುರುರಾಜ್ ಎಂ. ಶೆಟ್ಟಿ ಅಧ್ಯಕ್ಷತೆಯಲ್ಲಿ 'ಪಂಚ ಹಸಿರೆಲೆ ಗಣಪ' ನಾಮದೊಂದಿಗೆ ಈ ವರ್ಷದ ಆಚರಣೆ ನಡೆಯಲಿದೆ.
ಸೆ.14ರಂದು ಬೆಳಗ್ಗೆ 9:30ಕ್ಕೆ ಪ್ರಾಣ ಪ್ರತಿಷ್ಠೆ, 11:30ಕ್ಕೆ ಗಣ ಹೋಮ, ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 2:30ಕ್ಕೆ ಸಂಗೀತ-ಭಕ್ತಿ ರಸಮಂಜರಿ ನಡೆಯಲಿದೆ. ಸಂಜೆ 6 ಗಂಟೆಗೆ ರಂಗ ಪೂಜೆ, ರಾತ್ರಿ 7:30ಕ್ಕೆ ಮೆರವಣಿಗೆ ಹೊರಟು, ಉಡುಪಿಯ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಬನ್ನಂಜೆಯಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆಗೊಳ್ಳಲಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ರಾಜ್ ಸರಳಬೆಟ್ಟು ತಿಳಿಸಿದ್ದಾರೆ.