ಕುಂದಾಪುರ ಮೂಲದ ಕ್ಯಾನ್ಸರ್ ಪೀಡಿತ ಮಹಿಳೆಗೆ ಚಿಕಿತ್ಸೆಗಾಗಿ ಉಡುಪಿಯ ವಿಶು ಶೆಟ್ಟಿ ಅಂಬಲಪಾಡಿ ಆರ್ಥಿಕ ಸಹಾಯ ನೀಡಿದರು.
* ಮಾನವೀಯತೆ ಮೆರೆದ ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ
ಉಡುಪಿ: ದೈವಜ್ಞ ಕ್ರೆಡಿಟ್ ಕೋ&ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಗೌರವ ಸನ್ಮಾನದೊಂದಿಗೆ ನೀಡಿದ್ದ ಗೌರವ ಧನ 15 ಸಾವಿರ ರೂ.ವನ್ನು ಒಂಟಿಯಾಗಿ ಬದುಕುತ್ತಿದ್ದ ಕ್ಯಾನ್ಸರ್ ಪೀಡಿತ ಮಹಿಳೆಗೆ ಚಿಕಿತ್ಸೆಗಾಗಿ ನೀಡುವ ಮೂಲಕ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಸಹಕರಿಸಿದ್ದಾರೆ.
ಕುಂದಾಪುರ ಮೂಲದವರಾದ ವಜ್ರೇಶ್ವರಿ (34) ಅವರ ತಾಯಿ ಇತ್ತೀಚೆಗೆ ತೀರಿಕೊಂಡಿದ್ದು ಒಂಟಿಯಾಗಿ ಜೀವಿಸುತ್ತಿದ್ದಾರೆ. ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ ಮಹಿಳೆಯ ಅಸಹಾಯಕತೆಯ ಬಗ್ಗೆ ಮಾಹಿತಿ ತಿಳಿದಿದ್ದ ಅವರು, ತನಗೆ ಬಂದ ಸನ್ಮಾನದ ಗೌರವ ಧನದೊಂದಿಗೆ ವೈಯಕ್ತಿಕ 3 ಸಾವಿರ ರೂ. ಸೇರಿಸಿ ಒಟ್ಟು 18 ಸಾವಿರ ರೂ. ನೀಡಿ ಮಾನವೀಯತೆ ಮೆರೆದಿದ್ದಾರೆ.
ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ ಮಹಿಳೆಯ ಅಸಹಾಯಕತೆಯ ಬಗ್ಗೆ ಸಖಿ ಸೆಂಟರ್ಗೆ ಮಾಹಿತಿಯನ್ನೂ ನೀಡಿದ್ದು, ಕಾನೂನು ನೆರವಿಗಾಗಿ ಮನವಿಯನ್ನೂ ನೀಡಿದ್ದಾರೆ.
ನಾನು ಮಾಡುವ ಸಮಾಜ ಸೇವೆಯನ್ನು ಗುರುತಿಸಿ ಸಂಘ-ಸಂಸ್ಥೆಗಳು ಸನ್ಮಾನಿಸುವಾಗ ನೀಡುವ ಗೌರವ ಧನವನ್ನು ಹಲವಾರು ವರ್ಷದಿಂದ ಸಮಾಜ ಸೇವೆಗೆ ಮೀಸಲಿಟ್ಟಿದ್ದೇನೆ. ನನ್ನ ಬಳಿ ಇರುವ ಅಲ್ಪ ಪ್ರಮಾಣದ ಹಣವನ್ನೂ ಸೇರಿಸಿ ಅಸಹಾಯಕ ಮಹಿಳೆಯರಿಗೆ ಅಥವಾ ಮಕ್ಕಳಿಗೆ ನೀಡುತ್ತ ಬಂದಿದ್ದೇನೆ. ಈ ಬಾರಿ ಕ್ಯಾನ್ಸರ್ ಪೀಡಿತ ಒಂಟಿ ಮಹಿಳೆಗೆ ನೀಡಿದ್ದೇನೆ.