ಮೈಸೂರು ದಸರಾ ಕಲಾಕೃತಿ ರಾಜ್ಯ ಪ್ರಶಸ್ತಿಗೆ ಭಾಜನರಾದ ಉಡುಪಿಯ ಕಲಾವಿದರಾದ ಡಾ. ಜನಾರ್ದನ್​ ರಾವ್​ ಹಾವಂಜೆ ಹಾಗೂ ಸಕು ಪಾಂಗಾಳ. 
ಉಡುಪಿ

ಪಾಂಗಾಳ, ಹಾವಂಜೆ ಕಲಾಕೃತಿಗೆ ದಸರಾ ರಾಜ್ಯ ಪ್ರಶಸ್ತಿ

* ಅ.14ರಂದು ಮೈಸೂರಿನಲ್ಲಿ ಪ್ರದಾನ

ಉಡುಪಿ: ಮೈಸೂರು ದಸರಾ ನಿಮಿತ್ತ ಆಯೋಜಿಸಿರುವ ಕಲಾಪ್ರದರ್ಶನದಲ್ಲಿ ವೃತ್ತಿಪರ ಕಲಾವಿದರ ಪೈಟಿಂಗ್​ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕಲಾವಿದರಿಬ್ಬರ ಕಲಾಕೃತಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ.

ಆರ್ಟಿಸ್ಟ್ಸ್​ ಫೋರಂ (ರಿ.) ಉಡುಪಿಯ ಕಾರ್ಯದರ್ಶಿ ಹಾಗೂ ದೃಶ್ಯ ಕಲಾವಿದರಾದ ಸಕು ಪಾಂಗಾಳ ಅವರ ಕಲಾಕೃತಿ (ಶೀರ್ಷಿಕೆ ರಹಿತ)ಗೆ ಮತ್ತು ಆರ್ಟಿಸ್ಟ್ಸ್​ ಫೋರಂ (ರಿ.) ಉಡುಪಿಯ ಸದಸ್ಯ ಹಾಗೂ ಖ್ಯಾತ ಕಾವಿ ಕಲಾವಿದ ಡಾ. ಜನಾರ್ದನ್​ ರಾವ್​ ಹಾವಂಜೆ ಅವರ 'ಸಿಂಹ ಗಣಪತಿ' ಕಾವಿ ಕಲಾಕೃತಿಗೆ ದಸರಾ ರಾಜ್ಯ ಪ್ರಶಸ್ತಿ ಲಭಿಸಿದೆ.

ಅ.14ರಂದು ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜ್​ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಎಲ್ಲ ಕಲಾವಿದರ ಕಲಾಪ್ರದರ್ಶನ ಅ.11ರಿಂದ 24ರ ವರೆಗೆ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.