ಬಂಕೇರಕಟ್ಟ ಸೇತುವೆ ಕಾಮಗಾರಿಗೆ ಯಶ್​ಪಾಲ್​ ಸುವರ್ಣ ಗುದ್ದಲಿಪೂಜೆ ನೆರವೇರಿಸಿದರು. ಪ್ರಭಾಕರ ಪೂಜಾರಿ, ನಾರಾಯಣ ಕರ್ಕೇರ, ಬಾಲಕೃಷ್ಣ ಶೆಟ್ಟಿ, ವಿಜಯ ಕೊಡವೂರು, ದಯಾನಂದ ಸುವರ್ಣ, ರಾಮಚಂದ್ರ ಕುಂದರ್​, ಶಿವಕುಮಾರ ಅಂಬಲಪಾಡಿ ಇತರರಿದ್ದರು. 
ಉಡುಪಿ

ಬಂಕೇರಕಟ್ಟ ಸೇತುವೆ ಕನಸು ಶೀಘ್ರ ನನಸು

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಶಯ

* 5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ

ಉಡುಪಿ: ಉದ್ಯಾವರದಿಂದ ಮಲ್ಪೆ ಸಂಪರ್ಕಿಸುವ ಪ್ರಮುಖ ಮಾರ್ಗವಾದ ಬಂಕೇರಕಟ್ಟ ಸೇತುವೆಯು ಹಳೆಯದಾಗಿದ್ದು ಶಿಥಿಲಗೊಂಡಿದೆ. ಹೀಗಾಗಿ ಪ್ರತಿವರ್ಷ ಮಳೆಗಾಲದಲ್ಲಿ ಈ ಭಾಗದಲ್ಲಿ ಜಲಾವೃತಗೊಂಡು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದೀಗ ಸೇತುವೆ ಮರು ನಿರ್ಮಿಸಲಾಗುತ್ತಿದ್ದು ಲೋಕೋಪಯೋಗಿ ಇಲಾಖೆಯ ಮೂಲಕ 5 ಕೋಟಿ ರೂ. ಅನುದಾನ ನೀಡಲಾಗಿದೆ. ಸ್ಥಳೀಯರ ಸೇತುವೆಯ ಕನಸು ನನಸಾಗಲಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.

ಉಡುಪಿಯ ಕಲ್ಮಾಡಿ-ಕಿದಿಯೂರು ಮುಖ್ಯ ರಸ್ತೆಯಲ್ಲಿ ಬಂಕೇರಕಟ್ಟ ನೂತನ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ವೈಜ್ಞಾನಿಕ ರೀತಿಯಲ್ಲಿ ಹಾಗೂ 10 ಮೀಟರ್​ ಅಗಲದಲ್ಲಿ ಸೇತುವೆ ನಿರ್ಮಿಸಲಾಗುವುದು. ಕಳೆದ ವರ್ಷ 4 ಕೋಟಿ ರೂ. ವೆಚ್ಚದಲ್ಲಿ ಕಲ್ಮಾಡಿಯಿಂದ ಸಂಪಿಗೆ ನಗರದವರೆಗೆ ರಸ್ತೆ ಅಭಿವೃದ್ಧಿ ಮಾಡಿದ್ದು ಈ ಸೇತುವೆ ನಿರ್ಮಾಣದ ಬಳಿಕ ವಾಹನ ಸವಾರರಿಗೆ ಇನ್ನೂ ಹೆಚ್ಚು ಅನುಕೂಲವಾಗಲಿದೆ ಎಂದರು.

ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ ಮಾತನಾಡಿದರು. ಉಡುಪಿ ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ವಿಜಯ ಕೊಡವೂರು, ಮೀನುಗಾರ ಮುಖಂಡರಾದ ದಯಾನಂದ ಸುವರ್ಣ, ರಾಮಚಂದ್ರ ಕುಂದರ್​, ರತ್ನಾಕರ ಸಾಲ್ಯಾನ್​, ದಯಾಕರ ಸುವರ್ಣ, ಜಗನ್ನಾಥ ಕಡೆಕಾರು ಉಪಸ್ಥಿತರಿದ್ದರು.

ನಗರಸಭಾ ಸ್ಥಳೀಯ ಮಾಜಿ ಸದಸ್ಯ ಸುಂದರ ಕಲ್ಮಾಡಿ, ಅಂಬಲಪಾಡಿ ಗ್ರಾಪಂ ಮಾಜಿ ಸದಸ್ಯರಾದ ಶಶಿಧರ ಸುವರ್ಣ, ರಾಜೇಶ ಸುವರ್ಣ, ಭಾರತಿ ಭಾಸ್ಕರ​, ಸುಂದರ ಪೂಜಾರಿ, ಪ್ರಮೋದ ಸಾಲ್ಯಾನ್​, ಸುಜಾತಾ ಶೆಟ್ಟಿ, ಉಷಾ ಶೆಟ್ಟಿ, ಸೋಮನಾಥ ಬಿ.ಕೆ., ಪ್ರಮುಖರಾದ ಪ್ರವೀಣ ಶೆಟ್ಟಿ, ಶಿವಕುಮಾರ್​ ಅಂಬಲಪಾಡಿ, ವಿನಯ ಕಲ್ಮಾಡಿ, ರಾಜೇಂದ್ರ ಪಂದುಬೆಟ್ಟು, ರಾಮರಾಜ ಕಿದಿಯೂರು, ಜಗದೀಶ ಆಚಾರ್ಯ, ಲಕ್ಷ್ಮೀಶ ಬಂಗೇರ, ದಯಾಶಿನಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.