ಉಡುಪಿಯ ಶಾಸಕರ ಭವನದಲ್ಲಿ ತಾಲೂಕು ಕಸಾಪ ಸಮ್ಮೇಳನದ ಪ್ರಚಾರ ಭಿತ್ತಿಚಿತ್ರವನ್ನು ಯಶ್ಪಾಲ್ ಸುವರ್ಣ ಬಿಡುಗಡೆ ಮಾಡಿದರು. ರವಿರಾಜ್ ಎಚ್.ಪಿ., ರಂಜಿನಿ ವಸಂತ್, ಸತೀಶ್ ಕೊಡವೂರು, ರಾಘವೇಂದ್ರ ಪ್ರಭು ಕರ್ವಾಲು, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ವಸಂತ್, ಅನಿತಾ ಸಿಕ್ವೇರಾ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಶಯ
* ಕಸಾಪ ಸಮ್ಮೇಳನದ ಪ್ರಚಾರ ಭಿತ್ತಿಚಿತ್ರ ಬಿಡುಗಡೆ
ಉಡುಪಿ: ಕನ್ನಡ ಭಾಷೆಯ ರಕ್ಷಣೆ, ಉಳಿವು ಮತ್ತು ಜಾಗೃತಿ ಮೂಡಿಸುವಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿರಂತರ ಕಾರ್ಯಕ್ರಮ ನಡೆಸುತ್ತಿರುವುದು ಸಂತಸದ ವಿಚಾರ. ಇದೀಗ ಭಾಸ್ಕರಾನಂದ ಕುಮಾರ್ ಅವರ ಸರ್ವಾಧ್ಯಕ್ಷತೆಯಲ್ಲಿ ಮೇ 3ರಂದು ನಡೆಯಲಿರುವ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶ ಕಾಣಲಿ. ಕಾರ್ಯಕ್ರಮವು ಹೊಸತನದೊಂದಿಗೆ ಕನ್ನಡಿಗರನ್ನು ಇನ್ನಷ್ಟು ಒಗ್ಗೂಡಿಸಲಿ ಎಂದು ಶಾಸಕ ಯಶ್ಪಾಲ್ ಸುವರ್ಣ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಶಾಸಕರ ಭವನದಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ 16ನೇ ಸಮ್ಮೇಳನದ ಪ್ರಚಾರ ಭಿತ್ತಿಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಉಡುಪಿ ತಾಲೂಕು ಕಸಾಪ ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕೊಡವೂರು, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್, ಮಹಿಳಾ ಪ್ರತಿನಿಧಿ ಅನಿತಾ ಸಿಕ್ವೇರಾ, ಸದಸ್ಯರಾದ ದೀಪಾ ಕರ್ಕಿ, ಪ್ರಸನ್ನ ಕುಮಾರ್ ಹಿರೇಮಠ ಇತರರು ಉಪಸ್ಥಿತರಿದ್ದರು.