ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ
* ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ಗೆ ಪತ್ರ ರವಾನೆ
ಉಡುಪಿ: ಫಿಶ್ಮೀಲ್ ಉದ್ಯಮದ ಮೇಲೆ ವಿವಿಧ ನಿರ್ಬಂಧಾತ್ಮಕ ಕ್ರಮಗಳ ಕುರಿತಾಗಿ ಪ್ರಸ್ತಾಪಿಸಲಾಗುತ್ತಿದೆ. ಅದರಿಂದ ಕರಾವಳಿಯ ಮೀನುಗಾರರು, ದೋಣಿ ಮಾಲೀಕರು, ಮೀನು ಕಾರ್ಮಿಕರು ಹಾಗೂ ಮೀನುಗಾರಿಕೆಯನ್ನೇ ಅವಲಂಬಿಸಿರುವ ಸಮುದಾಯಗಳ ಜೀವನೋಪಾಯಕ್ಕೆ ತೊಂದರೆಯಾಗಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾಕಾ ಸಚಿವ ರಾಜೀವ್ ರಂಜನ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಇಂಡಿಯನ್ ಮರೈನ್ ಇನ್ಗ್ರೇಡಿಯಂಟ್ಸ್ ಅಸೋಸಿಯೇಷನ್ (ಐಎಂಐಎ) ಸಲ್ಲಿಸಿರುವ ಮನವಿಯನ್ನು ಕೇಂದ್ರ ಸಚಿವರಿಗೆ ರವಾನಿಸಿದ್ದಾರೆ.
ಫಿಶ್ಮೀಲ್ ಉದ್ಯಮಕ್ಕೆ ಸಂಬಂಧಿಸಿ ದೇಸೀಯ ಪೂರೈಕೆ ಕಡ್ಡಾಯ, ರಫ್ತು ನಿರ್ಬಂಧ, ಕೋಟಾ ಆಧಾರಿತ ಮಿತಿಗಳು ಹಾಗೂ ರಫ್ತು ಸೌಲಭ್ಯಗಳ ಹಿಂಪಡೆಯುವಿಕೆ ಸೇರಿದಂತೆ ವಿವಿಧ ಕ್ರಮಗಳಿಂದ ಆಗುವ ದುಷ್ಪರಿಣಾಮದ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಈ ಉದ್ಯಮವು ಕರಾವಳಿ ಮೀನುಗಾರಿಕೆ ಮೌಲ್ಯ ಸರಪಳಿಯ ಪ್ರಮುಖ ಭಾಗವಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿ ಯಾವುದೇ ನೀತಿ-ನಿರ್ಧಾರಗಳು ಮೀನು ಖರೀದಿ, ಮೀನು ಇಳಿಸುವ ಕೇಂದ್ರಗಳಲ್ಲಿನ ಬೆಲೆ, ಮೀನುಗಾರಿಕಾ ಚಟುವಟಿಕೆ ಹಾಗೂ ಪೂರಕ ಉದ್ಯೋಗಗಳ ಮೇಲೆ ನೇರ ಪರಿಣಾಮ ಬೀರಬಹುದಾಗಿದೆ ಎಂದು ತಿಳಿಸಿದ್ದಾರೆ.
ಇಂತಹ ರ್ನಿಬಂಧಾತ್ಮಕ ಕ್ರಮಗಳಿಂದ ಮೀನುಗಳ ಮೂಲ ಬೆಲೆಯಲ್ಲಿ ಕುಸಿತವಾಗಿ ಸಾಂಪ್ರದಾಯಿಕ ಮೀನುಗಾರಿಕಾ ಸಮುದಾಯಗಳ ಆದಾಯ ಹಾಗೂ ಆರ್ಥಿಕ ಸ್ಥಿರತೆಗೂ ಧಕ್ಕೆಯಾಗಬಹುದು. ಫಿಶ್ಮೀಲ್ ಕ್ಷೇತ್ರದ ಬೆಲೆ ಮತ್ತು ಪೂರೈಕೆ ಪರಿಸ್ಥಿತಿಯ ಮೇಲೆ ಜಾಗತಿಕ ಮಾರುಕಟ್ಟೆ ಹಾಗೂ ಅಂತಾರಾಷ್ಟ್ರೀಯ ಬೇಡಿಕೆ-ಪೂರೈಕೆ ಅಂಶಗಳೂ ಪ್ರಭಾವ ಬೀರುತ್ತವೆ. ಹೀಗಾಗಿ ಯಾವುದೇ ನೀತಿ, ಹಸ್ತಕ್ಷೇಪದ ಮೊದಲು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿತಾಸಕ್ತಿದಾರರು, ಫಿಶ್ಮೀಲ್ ಉದ್ಯಮಿಗಳು ಹಾಗೂ ಸಂಬಂಧಿತ ವಲಯಗಳ
ಬೇಕು. ಮೀನುಗಾರರು ಮತ್ತು ಕರಾವಳಿ ಸಮುದಾಯಗಳ ಜೀವನೋಪಾಯಕ್ಕೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಉಂಟಾಗದಂತೆ ಸಮತೋಲಿತ ನೀತಿ ರೂಪಿಸಬೇಕು ಎಂದು ಸಂಸದ ಕೋಟ ವಿನಂತಿಸಿದ್ದಾರೆ.