ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ. 
ಉಡುಪಿ

ದೀದಿ ಸೋಲು ದೇಶ ಗೆದ್ದ ಅನುಭವ ಕೊಟ್ಟಿದೆ

* ಉಡುಪಿ ಸಂಸದ ಕೋಟ ಪೂಜಾರಿ ಪ್ರತಿಕ್ರಿಯೆ

* ಸಂಟನಾ ಶಕ್ತಿ ವೃದ್ಧಿಸಿಕೊಂಡ ಬಿಜೆಪಿ

ಉಡುಪಿ: ನಿರೀಕ್ಷೆ ಮೀರಿಸಿದ ಪಶ್ಚಿಮ ಬಂಗಾಳದ ಚುನಾವಣಾ ಗೆಲುವು ದೇಶ ಗೆದ್ದ ಅನುಭವ ಕೊಟ್ಟಿದೆ. ಅಲ್ಲಿನ ದೀದಿ (ಮಮತಾ ಬ್ಯಾನರ್ಜಿ) ಸರ್ಕಾರ ಕೇವಲ ಬಿಜೆಪಿ ಮತ್ತು ಮೋದಿ ವಿರೋಧಿಯಾಗಿರಲಿಲ್ಲ. ಬದಲಾಗಿ ರಾಷ್ಟ್ರ ವಿರೋಧಿಯಾಗಿತ್ತು. ಪಂಚ ರಾಜ್ಯಗಳ ಈ ಚುನಾವಣಾ ಫಲಿತಾಂಶದಿಂದ ಭಾರತೀಯ ಜನತಾ ಪಕ್ಷದ ಸಂಘಟನಾ ಶಕ್ತಿ ಹೆಚ್ಚಿಸಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

'ದೇಶ ಮೊದಲು' ಸಂದೇಶ

ಉಡುಪಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಲದ ಸರ್ಕಾರ ಸ್ತ್ರೀ ವಿರೋಧಿ, ಹಿಂದೂ ವಿರೋಧಿ, ದೇಶ ವಿರೋಧಿಯೂ ಆಗಿತ್ತು. ಅಂತಹ ಸರ್ಕಾರವೊಂದರ ನಿರ್ಗಮನವು 'ದೇಶ ಮೊದಲು' ಎಂಬ ರಾಷ್ಟ್ರ ಭಕ್ತರು ನಿಟ್ಟಿಸಿರು ಬಿಡುವಂತಾಗಿದೆ. ಅಸ್ಸಾಂ, ಪುದುಚೇರಿಯಲ್ಲಿನ ಗೆಲುವು ಹಾಗೂ ತಮಿಳುನಾಡು, ಕೇರಳದ ಫಲಿತಾಂಶ ಏನೇ ಆದರೂ ಎನ್​ಡಿಎ ತನ್ನ ಶಕ್ತಿ ವೃದ್ಧಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಉಪಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಆಡಳಿತ ಪಕ್ಷ ಗೆದ್ದಿದೆ ಎನ್ನುವುದಕ್ಕಿಂತ ಹಣಬಲ ಗೆದ್ದಿದೆ ಎಂದು ವರದಿಗಳು ತಿಳಿಸುತ್ತಿವೆ. ಒಟ್ಟಾರೆ ಫಲಿತಾಂಶವನ್ನು ನಾವು ಗೌರವಿಸುತ್ತೇವೆ ಎಂದು ಸಂಸದ ಕೋಟ ತಿಳಿಸಿದ್ದಾರೆ.