ಬ್ರಹ್ಮಾವರದಲ್ಲಿ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮೃತಪಟ್ಟ ದಕ್ಷ್ ಪೂಜಾರಿ ಕುಟುಂಬಕ್ಕೆ ಯಶ್ಪಾಲ್ ಸುವರ್ಣ ಸಾಂತ್ವನ ಹೇಳಿದರು. ಬಿ.ಎನ್. ಶಂಕರ್ ಪೂಜಾರಿ, ಮಹೇಶ್ ಕೋಟ್ಯಾನ್, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸುಶಾಂತ್ ಪೂಜಾರಿ, ರಾಜು ಪೂಜಾರಿ ಉಪ್ಪೂರು, ನಿತ್ಯಾನಂದ ಪೂಜಾರಿ ಚಾಂತಾರು, ಗೌತಮ್ ಅಗ್ರಹಾರ, ಮಹೇಂದ್ರ ನೀಲಾವರ, ಮಿಥುನ್ ಅಮೀನ್, ಗಿರಿಧರ್ ಚಾಂತಾರು, ಸಂತೋಷ್ ಜತ್ತನ್ ಇತರರಿದ್ದರು.
* ತೆಂಗಿನಕಾಯಿ ಬಿದ್ದು ಮೃತಪಟ್ಟ ಮಗುವಿನ ಕುಟುಂಬಕ್ಕೆ ಸಾಂತ್ವನ
ಉಡುಪಿ: ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಹೆರಂಜೆಯಲ್ಲಿ ಒಂದೂವರೆ ವರ್ಷದ ದಕ್ಷ್ ಪೂಜಾರಿ ಎಂಬ ಬಾಲಕನ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮೃತಪಟ್ಟಿದ್ದು, ಅವರ ಮನೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಶಾಸಕ ಯಶ್ಪಾಲ್ ಸುವರ್ಣ ಶುಕ್ರವಾರ (ಜೂ.12) ಭೇಟಿ ನೀಡಿ ಸಾಂತ್ವನ ಹೇಳಿದರು.
ಮಗುವಿನ ತಂದೆಯ ಬಳಿ ಘಟನೆಯ ಬಗ್ಗೆ ಮಾಹಿತಿ ಪಡೆದ ಯಶ್ಪಾಲ್, ತಕ್ಷಣವೇ ಸರ್ಕಾರಕ್ಕೆ ಈ ದುರ್ಟನೆಯನ್ನು ವರದಿ ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಸರ್ಕಾರದಿಂದ ಗರಿಷ್ಠ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಮೃತ ಮಗುವಿನ ತಂದೆ ಪ್ರಶಾಂತ್ ಪೂಜಾರಿ, ತಾಯಿ ಸುಚಿತ್ರಾ ಹಾಗೂ ಕುಟುಂಬಸ್ಥರಿಗೆ ಸಂತೈಸಿ, ವೈಯುಕ್ತಿಕವಾಗಿ ಪರಿಹಾರ ಧನ ನೀಡಿದರು.
ರಸ್ತೆಗೆ ಅನುದಾನ ಭರವಸೆ
ಘಟನೆ ನಡೆದ ಸ್ಥಳಕ್ಕೆ ಸೂಕ್ತ ರಸ್ತೆ ಸಂಪರ್ಕ ಮಾಡಿಕೊಡುವಂತೆ ಈ ವೇಳೆ ಸ್ಥಳೀಯರು ಶಾಸಕ ಯಶ್ಪಾಲ್ಗೆ ಮನವಿ ಸಲ್ಲಿಸಿದರು. ರಸ್ತೆ ಸಂಪರ್ಕ ಕಲ್ಪಿಸಲು ಅಲ್ಲಿನ ಜಾಗದ ಮಾಲೀಕರು ಅವಕಾಶ ನೀಡಿದರೆ ರಸ್ತೆ ಕಾಮಗಾರಿಗೆ ಆದ್ಯತೆಯ ಮೇರೆಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ, ಪಕ್ಷದ ಪ್ರಮುಖರಾದ ಮಹೇಶ್ ಕೋಟ್ಯಾನ್, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸುಶಾಂತ್ ಪೂಜಾರಿ, ರಾಜು ಪೂಜಾರಿ ಉಪ್ಪೂರು, ನಿತ್ಯಾನಂದ ಪೂಜಾರಿ ಚಾಂತಾರು, ಗೌತಮ್ ಅಗ್ರಹಾರ, ಮಹೇಂದ್ರ ನೀಲಾವರ, ಮಿಥುನ್ ಅಮೀನ್, ಗಿರಿಧರ್ ಚಾಂತಾರು, ಸಂತೋಷ್ ಜತ್ತನ್, ಉದಯ್ ಕಾಮತ್, ದಿನೇಶ್ ಚಾಂತರು, ಪ್ರೇಮಾ ಶೆಟ್ಟಿ, ಅಶೋಕ್ ಹೇರೂರು, ಹೇಮಾ ಅಶೋಕ್, ರಮ್ಯಾ ಉಪ್ಪೂರು, ಅಶೋಕ್ ಅಮೀನ್, ಶೋಭಾ ಪೂಜಾರಿ ಹಂದಾಡಿ, ಬೇಬಿ ಚಾಂತಾರು, ರೇವತಿ, ಶೈಲಜಾ ಹೇರೂರು, ಕಂದಾಯ ಇಲಾಖೆಯ ಅಧಿಕಾರಿ ರಾಜು, ಪಿಡಿಒ ಮೀರಾ ಇತರರು ಇದ್ದರು.