ಉಡುಪಿ: ಬೆಂಗಳೂರಿನಲ್ಲಿ ಯಲಹಂಕದ ಎಪಿಟಿಎಸ್ನಲ್ಲಿ ಅ.6ರಿಂದ 8ರ ವರಗೆ ನಡೆದ 8ನೇ ವರ್ಷದ ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟದ ವಿವಿಧ ಸ್ಪರ್ಧೆಗಳಲ್ಲಿ ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಅನೇಕ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.
ಸಿಪಿಸಿ ವಿನಾಯಕ ಮೇಸ್ತ ಎಫ್ಎಸ್ಎಲ್ ವಿಭಾಗದ ಪೊಲೀಸ್ ಪೋಟ್ರೇಟ್ ಸ್ಪರ್ಧೆಯಲ್ಲಿ ಪ್ರಥಮ, ಅಬ್ಸರ್ವೇಶನ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಪೊಲೀಸ್ ವಿಡಿಯೋಗ್ರಫಿ ಸ್ಪರ್ಧೆಯಲ್ಲಿ ಆರ್ಎಸ್ಐ ಗಿರೀಶ್ ಪ್ರಥಮ, ಶಿವಾನಂದ ಸಿಎಚ್ಸಿ ತೃತೀಯ, ಶ್ವಾನದಳದ ಸ್ಫೋಟಕ ಪತ್ತೆ ಸ್ಪರ್ಧೆಯಲ್ಲಿ ಶ್ವಾನ ತೇಜಸ್ (ಹ್ಯಾಂಡ್ಲರ್ ಎಪಿಸಿ ರಾಘವೇಂದ್ರ ಆಚಾರಿ, ಎಪಿಸಿ ಗಣೇಶ್ ಎಂ.) ತೃತೀಯ, ಶ್ವಾನದಳದ ಅಪರಾಧ ಪತ್ತೆ ಸ್ಪರ್ಧೆಯಲ್ಲಿ ಶ್ವಾನ ಸ್ನೈಪರ್ (ಹ್ಯಾಂಡ್ಲರ್ ಎಪಿಸಿ ಹರೀಶ್ ಶೆಟ್ಟಿ, ಎಪಿಸಿ ಯೋಗೀಶ್ ನಾಯ್ಕ್) ತೃತೀಯ ಸ್ಥಾನ ಗಳಿಸಿದ್ದಾರೆ.
ಸತತ 5ನೇ ಬಾರಿ ಪಶ್ಚಿಮ ವಲಯದ ಮಂಗಳೂರು ತಂಡವು ರಾಜ್ಯಮಟ್ಟದಲ್ಲಿ ಚಾಂಪಿಯನ್ ತಂಡವಾಗಿ ಸಾಧನೆ ಮಾಡಿದೆ. ವಿಜೇತರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಬಹುಮಾನ ವಿತರಿಸಿದರು.