ಉಡುಪಿ ಜಿಲ್ಲಾ ವರ್ತಕರ ಸಂಘದ ವತಿಯಿಂದ ಬನ್ನಂಜೆಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಳನೀರು ಅಭಿಷೇಕ ನಡೆಯಿತು. ಐರೋಡಿ ಸಹನಶೀಲ ಪೈ, ಪಾದೆಮಠ ನಾಗರಾಜ್ ಅಡಿಗ, ಮಡಿ ವಿಶ್ವನಾಥ ಖಾರ್ವಿ, ಸತೀಶ್ ಕಿಣಿ, ಸುರೇಶ್ ಪೈ, ಕರುಣಾ ಪೈ, ರಾಜ ಶೆಟ್ಟಿ ಇತರರಿದ್ದರು.
* ಮುಂದುವರಿದ ಮೋಡ-ಬಿಸಿಲು ವಾತಾವರಣ
ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ನಾಲ್ಕು ದಿನ (ಜು.6ರಿಂದ 9ರ ವರೆಗೆ) ಭಾರಿ ಗಾಳಿಯೊಂದಿಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ನಿರೀಕ್ಷೆಯಂತೆ ಕರಾವಳಿಯಲ್ಲಿ ಮಳೆಯ ಅಬ್ಬರ ಕಂಡುಬರಲಿಲ್ಲ. ಆಗಾಗ ಕೆಲ ಸಮಯ ಗಾಳಿ ಬೀಸಿದ್ದು, ಅಲ್ಪ ಮಳೆಯಾಗಿದೆ.
ಉಡುಪಿ ನಗರದಲ್ಲಿ ಸೋಮವಾರ (ಜು.6) ಮಳೆ ಣಿಸಿತ್ತು. ಬೆಳಗ್ಗೆ 10:30ಕ್ಕೆ ಹಾಗೂ ಮಧ್ಯಾಹ್ನ 3:30ಕ್ಕೆ ಭಾರಿ ಪ್ರಮಾಣದಲ್ಲಿ ಮೋಡ ಕವಿದು 15 ನಿಮಿಷ ಉತ್ತಮವಾಗಿ ಮಳೆಯಾಯಿತು. ದಿನಪೂರ್ತಿ ಮೋಡ-ಬಿಸಿಲಿನ ವಾತಾವರಣವಿದ್ದು, ಆಗಾಗ ಕೆಲ ತಾಸುಗಳ ಬಳಿಕ ಐದಾರು ನಿಮಿಷವಷ್ಟೇ ಸಾಧಾರಣ ಮಳೆಯಾಯಿತು.
14 ಮನೆಗಳಿಗೆ ಹಾನಿ
ವಿಪರೀತ ಗಾಳಿಯಿಂದ ಮರಗಳು ಉರುಳಿಬಿದ್ದು ಜಿಲ್ಲೆಯಲ್ಲಿ 14 ಮನೆಗಳು ಹಾನಿಗೊಂಡಿವೆ. ಕುಂದಾಪುರ ತಾಲೂಕೊಂದರಲ್ಲೇ 14 ಮನೆ, ಬೈಂದೂರು ಹಾಗೂ ಹೆಬ್ರಿ ತಾಲೂಕಿನಲ್ಲಿ ತಲಾ 1 ಮನೆ ಭಾಗಶ@ ಹಾನಿಗೊಂಡಿವೆ.
ಮಳೆ ಮಾಹಿತಿ
ಕಾರ್ಕಳ- 27.03 ಮಿ.ಮೀ., ಕುಂದಾಪುರ- 71.07, ಉಡುಪಿ- 33.05, ಬೈಂದೂರು- 50.0, ಬ್ರಹ್ಮಾವರ- 32.09, ಕಾಪು- 19.09 ಮಿ.ಮೀ., ಹೆಬ್ರಿ- 47.08 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 45.03 ಮಿ.ಮೀ. ಮಳೆಯಾಗಿದೆ.
ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಬೈಂದೂರು ತಾಲೂಕಿನ ಒತ್ತಿನೆಣ್ಣೆ ಗುಡ್ಡ ಕುಸಿತ ಪ್ರದೇಶಕ್ಕೆ ಸೋಮವಾರ (ಜು.6) ಭೇಟಿ ನೀಡಿ ಪರಿಶೀಲಿಸಿದರು. ರಾ.ಹೆ. ಇಲಾಖೆಯ ಇಂಜಿನಿಯರ್ಗಳಿಂದ ಮಾಹಿತಿ ಪಡೆದರು. ಸುರಕ್ಷತಾ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ವರುಣ ಕೃಪೆಗೆ ವರ್ತಕರಿಂದ ಪೂಜೆ
ಲೋಕ ಕಲ್ಯಾಣಾರ್ಥವಾಗಿ ಹಾಗೂ ನಾಡಿನಲ್ಲಿ ಉತ್ತಮವಾದ ಮಳೆ, ಬೆಳೆ, ವ್ಯಾಪಾರ-ವಹಿವಾಟು, ಮೀನುಗಾರಿಕೆಗಾಗಿ ಪ್ರಾರ್ಥಿಸಿ ಉಡುಪಿ ಜಿಲ್ಲಾ ವರ್ತಕರ ಸಂಘದ ವತಿಯಿಂದ ಉಡುಪಿ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಳನೀರು ಅಭಿಷೇಕ ನಡೆಸಿದರು. ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಮಧುಕರ್ ಉಪಾಧ್ಯಾಯ ಅವರು ಅಭಿಷೇಕ ಕಾರ್ಯ ನೆರವೇರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪಾದೆಮಠ ನಾಗರಾಜ್ ಅಡಿಗ ಅವರು ಅಭಿಷೇಕದ ಸಂಕಲ್ಪ ಮಾಡಿದರು. ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ, ಸಂಪರ್ಕಾಧಿಕಾರಿ ಮಡಿ ವಿಶ್ವನಾಥ ಖಾರ್ವಿ, ಪದಾಧಿಕಾರಿಗಳಾದ ಸತೀಶ್ ಕಿಣಿ, ಸುರೇಶ್ ಪೈ, ಕರುಣಾ ಪೈ, ರಾಜ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಖ್ಯಾತ ಸಂಗೀತಗಾರ್ತಿ ಮಾಯಾ ಕಾಮತ್ ಹಾಗೂ ರಮ್ಯಾ ಮಲ್ಯ ತಂಡದವರಿಂದ ಭಜನಾ ಕಾರ್ಯಕ್ರಮ ಜರುಗಿತು.